ಕಾಸರಗೋಡು: ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸುವ ಬೇಕಲ ಅಂತರಾಷ್ಟ್ರೀಯ ಬೀಚ್ ಫೆಸ್ಟ್ ಎರಡನೇ ಆವೃತ್ತಿಗೆ ಸಜ್ಜಾಗಿದೆ. ಮೊದಲ ಆವೃತ್ತಿಯ ಬೀಚ್ ಫೆಸ್ಟ್ ಮಾದರಿಯಲ್ಲಿಯೇ ಎರಡನೇ ಆವೃತ್ತಿಯ ಬೀಚ್ ಫೆಸ್ಟ್ ಅನ್ನು ಜನ ಕೈಗೆತ್ತಿಕೊಳ್ಳಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ. ಅಧ್ಯಕ್ಷರಾಗಿ ಶಾಸಕ ಸಿ.ಎಚ್.ಕುಂಞಂಬು ಹಾಗೂ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಂಚಾಲಕರಾಗಿ ಸಮಗ್ರ ಸಂಘಟನಾ ಸಮಿತಿ ರಚಿಸಲಾಗಿದೆ. 26 ಉಪ ಸಮಿತಿಗಳನ್ನೂ ರಚಿಸಲಾಗಿದೆ.
ಕುಟುಂಬಶ್ರೀ ಹಸಿರು ಕ್ರಿಯಾಸೇನೆ ಮೂಲಕ ಟಿಕೆಟ್‍ಗಳನ್ನು ಮಾರಾಟ ಮಾಡಲಾಗುವುದು. ಪ್ರವಾಸೋದ್ಯಮ ಮಳಿಗೆ ಮತ್ತು ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು. ಕೈಗಾರಿಕೆ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದ ಕಲ್ಯಾಣ ನಿಗಮ ಮತ್ತು ಕುಟುಂಬಶ್ರೀ ಮಳಿಗೆಗಳನ್ನು ಸಹ ಸ್ಥಾಪಿಸಲಾಗುವುದು. ವಿವಿಧ ದಿನಗಳಲ್ಲಿ ಗಣ್ಯ ಸಾಂಸ್ಕøತಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಮಾತನಾಡಲಿದ್ದಾರೆ. ಪ್ರಧಾನ ವೇದಿಕೆಯಲ್ಲಿ ಹೆಸರಾಂತ ಕಲಾವಿದರ ಕಲಾ ಔತಣ ಪ್ರಮುಖ ಆಕರ್ಷಣೆಯಾಗಲಿದೆ.