ಕಾಸರಗೋಡು: ಅಸೋಸಿಯೆಶನ್ ಆಫ್ ಫಿಸಿಶಿಯನ್ ಅಫ್ ಇಂಡಿಯಾದ ಕೇರಳ ಘಟಕದಿಂದ ವರ್ಷಂಪ್ರತಿ ಕೊಡುವ ಡಾ. ಎನ್, ಎನ್ ಅಶೋಕನ್ ಸ್ಮಾರಕ ಉಪನ್ಯಾಸ ಪ್ರಶಸ್ತಿ ಕಾಸರಗೋಡಿನ ಪ್ರಸಿದ್ದ ವೈದ್ಯ ಡಾ.ಜನಾರ್ದನ ನಾಯ್ಕ್ ರವರಿಗೆ ಪ್ರಧಾನ ಮಾಡಲಾಯಿತು.
ಕಾಞಂಗಾಡು ರಾಜ್ ರೆಸಿಡೆನ್ಸಿ ಯಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನದಲ್ಲಿ , ರಾಜ್ಯಾಧ್ಯಕ್ಷ ಡಾ. ಅನಿಲ್ ಕುಮಾರ್ ರವರು ಪ್ರಶಸ್ತಿಯನ್ನು ನೀಡಿದರು. ಕಾರ್ಯದರ್ಶಿ ಡಾ. ನೀರಜ್ ಮಾಣಿಕೋತ್, ಡಾ. ಸಜೇಶ್ ಆಶೋಕನ್, ಕಲ್ಲಿಕೋಟೆಯ ವಿಶ್ರಾಂತ ಪ್ರೊ. ಪಿ.ಕೆ ಶಶಿಧರನ್, ಪ್ರೊ. ಸುಮ, ಡಾ. ಕಿಶೋರ್ ಕುಮಾರ್, ಐ ಎಮ್ ಎ ಯ ಜಿಲ್ಲಾಧ್ಯಕ್ಷೆ ಡಾ. ದೀಪಿಕಾ ಕಿಶೋರ್ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಜನಾರ್ದನ ನಾಯ್ಕ್ ರವರು " ವೈದ್ಯಕೀಯ ರಂಗದಲ್ಲಿ ನನ್ನ ಪ್ರಯಾಣ" ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.