ನವದೆಹಲಿ: 'ಬ್ರಿಟಿಷ್ ಸಾಮ್ರಾಜ್ಯಶಾಹಿ ಕಾಲದಲ್ಲಿ ತಂದಿದ್ದ ಸಿಆರ್‌ಪಿಸಿ ಕಾನೂಗಳಿಂದ ಭಾರತದ ಸಾಧು-ಸಂತರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು' ಎಂದು ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ.
ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಹೊಸ ಮೂರು ಕ್ರಿಮಿನಲ್ ಕಾನೂನುಗಳ ಮಸೂದೆಗಳಿಗೆ ಅಂಗೀಕಾರ ದೊರೆತಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.
ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಹೊಸ ಮೂರು ಕ್ರಿಮಿನಲ್ ಕಾನೂನುಗಳ ಮಸೂದೆಗಳಿಗೆ ಅಂಗೀಕಾರ ದೊರೆತಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.
'ಕರಾಳ ಕಾಯ್ದೆಗಳಲ್ಲಿ ಬದಲಾವಣೆ ತರಲು ಈ ಹಿಂದಿನ ಕಾಂಗ್ರೆಸ್ ಸರ್ಕಾರ ಯಾವುದೇ ಪ್ರಯತ್ನವನ್ನೂ ಮಾಡಿರಲಿಲ್ಲ' ಎಂದು ಪ್ರಗ್ಯಾ ಆರೋಪಿಸಿದರು.
'ಇನ್ಮುಂದೆ ನಮ್ಮ ದೇಶ- ನಮ್ಮ ಕಾನೂನು ಎಂಬುದು ಚಾಲ್ತಿಯಲ್ಲಿರುತ್ತದೆ. ಇದರಿಂದ ಅಭಿವೃದ್ಧಿ ಸುಗಮವಾಗಲಿದೆ' ಎಂದಿದ್ದಾರೆ.
'ಕರಾಳ ಕಾಯ್ದೆಗಳಲ್ಲಿ ಬದಲಾವಣೆ ತರಲು ಒಬ್ಬ ದೇಶಭಕ್ತನಿಗೆ ಮಾತ್ರ ಸಾಧ್ಯವಾಯಿತು. ಬ್ರಿಟಿಷರು ಭಾರತೀಯ ದಂಡ ಸಂಹಿತೆ ಎಂದು ಹೆಸರಿಟ್ಟಿದ್ದರು. ಇದು ಗುಲಾಮಿ ಮನಸ್ಥಿತಿಯನ್ನು ತೋರಿಸುತ್ತಿತ್ತು' ಎಂದು ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023, ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಮಸೂದೆಗಳಿಗೆ ಅಂಗೀಕಾರ ದೊರೆತಿದೆ.
ಭಾರತೀಯ ದಂಡ ಸಂಹಿತೆ 1860, ಕ್ರಿಮಿನಲ್ ಪ್ರೊಸೀಜರ್ (CrPC) 1973 ಮತ್ತು ಇಂಡಿಯನ್ ಎವಿಡೆನ್ಸ್ ಆಯಕ್ಟ್, 1872 ಬದಲಾಯಿಸಿ ಹೊಸ ಮಸೂದೆ ಮಂಡಿಸಲಾಗಿದೆ.