ತಿರುವನಂತಪುರಂ: ರಾಜ್ಯದಲ್ಲಿ ಖಾಲಿ ಇರುವ ಕಟ್ಟಡಗಳನ್ನು ಪೋಲೀಸರಿಗೆ ಬಾಡಿಗೆ ನೀಡುವುದಾಗಿ ಬಿಎಸ್‍ಎನ್‍ಎಲ್ ಘೋಷಿಸಿದೆ.
ಬಿಎಸ್‍ಎನ್‍ಎಲ್ ಒಡೆತನದಲ್ಲಿರುವ ಖಾಲಿ ಕಟ್ಟಡಗಳು, ಕ್ವಾರ್ಟರ್ಸ್ ಗಳು ಮತ್ತು ಕಚೇರಿಯನ್ನು ಬಾಡಿಗೆಗೆ ನೀಡಬಹುದು ಎಂದು ಹಿರಿಯ ಪ್ರಧಾನ ವ್ಯವಸ್ಥಾಪಕರು ಡಿಜಿಪಿಗೆ ಪತ್ರ ಬರೆದಿದ್ದಾರೆ.
ಅಧಿಕಾರಿಗಳ ನಿವೃತ್ತಿಯ ನಂತರ ಹಲವು ಬಿಎಸ್‍ಎನ್‍ಎಲ್ ಕಟ್ಟಡಗಳು ಖಾಲಿ ಬಿದ್ದಿವೆ. ತಾಂತ್ರಿಕ ಉತ್ಕøಷ್ಟತೆಯಿಂದಾಗಿ ಹೆಚ್ಚಿನ ವಿನಿಮಯ ಕೇಂದ್ರಗಳು ಖಾಲಿಯಾಗಿವೆ ಎಂದು ಬಿಎಸ್ ಎನ್ ಎಲ್ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಡಿಜಿಪಿಗೆ ಪತ್ರ ಮುಖೇನ ತಿಳಿಸಲಾಗಿದೆ.