ಎರ್ನಾಕುಳಂ: ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಉದ್ಯಮಿ ಅಬ್ದುರ್ ರೆಹಮಾನ್ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ. 3.58 ಕೋಟಿ ಮೌಲ್ಯದ ಸ್ಥಿರಾಸ್ತಿ, ಬ್ಯಾಂಕ್ ಖಾತೆಗಳು ಮತ್ತು ಕಂಪನಿಗಳ ಷೇರುಗಳನ್ನು ಇಡಿ ಜಪ್ತಿ ಮಾಡಿದೆ.
ಅಬ್ದುರ್ ರೆಹಮಾನ್ ಮತ್ತು ಅವರ ಪತ್ನಿ ಜರೀನಾ ಮಜೀದ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. ಕೊಚ್ಚಿ, ಕೋಯಿಕ್ಕೋಡ್ ಮತ್ತು ಕಾಸರಗೋಡಿನ ಎಂಟು ಕೇಂದ್ರಗಳ ಮೇಲೆ ಇಡಿ ದಾಳಿ ನಡೆಸಿದೆ.
ಅಬ್ದುರ್ ರೆಹಮಾನ್ ಶಾರ್ಜಾದಲ್ಲಿ ಅಲ್ಲಿಯ ಬ್ಯಾಂಕ್ ಗೆ 83 ಕೋಟಿ ರೂ.ಗೆ ವಂಚಿಸಿದ್ದಾರೆ. ಒಟ್ಟು 300 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆದಿದೆ. 2017-2018ರ ಅವಧಿಯಲ್ಲಿ ವಂಚನೆ ನಡೆದಿದೆ. ಅಬ್ದುಲ್ ರೆಹಮಾನ್ ಕೇರಳದಲ್ಲಿ ಸಿನಿಮಾ ಮತ್ತು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದರು.