HEALTH TIPS

ಶಿವಳ್ಳಿ ಬ್ರಾಹ್ಮಣ ಜಿಲ್ಲಾ ಕ್ರೀಡೋತ್ಸವ ಮತ್ತು ಸಾಂಸ್ಕøತಿಕೋತ್ಸವ: ಮುಳ್ಳೇರಿಯ ವಲಯಕ್ಕೆ ಆಗ್ರಸ್ಥಾನ

              ಮುಳ್ಳೇರಿಯ: ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆತಿಥ್ಯದಲ್ಲಿ ಮುಳ್ಳೇರಿಯ ಗಣೇಶ ಮಂದಿರ ಹಾಗೂ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ಮುಕ್ತಾಯಗೊಂಡ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಕ್ರೀಡೋತ್ಸವ ಮತ್ತು ಸಾಂಸ್ಕøತಿಕೋತ್ಸವದಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾವು 445 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದೆ. ಕಾಸರಗೋಡು ವಲಯ ಶಿವಳ್ಳಿ ಬ್ರಾಹ್ಮಣ ಸಭಾವು 355 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದೆ. ಮಂಜೇಶ್ವರ ವಲಯವು 315 ಅಂಕಗಳನ್ನು ಹಾಗೂ ಏತಡ್ಕ ವಲಯವು 295 ಅಂಕಗಳನ್ನು ಹಾಗೂ ಕಾಂಞಂಗಾಡು ವಲಯವು 175 ಅಂಕಗಳನ್ನು ಲಭಿಸಿವೆ. 

             ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಟಿ ಕೆ ಮಂಜುನಾಥ ಹಾಗೂ ಪುತ್ತೂರಿನ ನರಿಮೊಗರಿನ ಸರಸ್ವತಿ ವಿದ್ಯಾ ಮಂದಿರದ ಮುಖ್ಯಸ್ಥ ಅವಿನಾಶ್ ಉಂಗ್ರುಪುಳಿತ್ತಾಯ ಕೊಡಂಕಿರಿ ಅವರು ವಿಜೇತ ವಲಯಗಳಿಗೆ ಶಾಶ್ವತ ಫಲಕವನ್ನು ವಿತರಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಡಾ. ಬಿ. ಸೀತಾರಾಮ ಕಡಮಣ್ಣಾಯ, ಜಿಲ್ಲಾ ಖಜಾಂಜಿ ಅಡೂರು ಶ್ರೀಪ್ರಕಾಶ ಪಾಂಙಣ್ಣಾಯ, ಮುಳ್ಳೇರಿಯ ವಲಯ ಸಮಿತಿಯ ಅಧ್ಯಕ್ಷ ಡಾ.ರವಿಪ್ರಸಾದ್, ಕಾರ್ಯದರ್ಶಿ ರಾಘವೇಂದ್ರ ರಾವ್, ಖಜಾಂಜಿ ರಾಜಾರಾಮ ಸರಳಾಯ ಮೊದಲಾದವರು ಉಪಸ್ಥಿತರಿದ್ದರು. 

             ತುಳು ಲಿಪಿಯ ಫಲಕ :  ಸಾಂಸ್ಕøತಿಕೋತ್ಸವದ ಅರವಿಂದ ಕುಮಾರ್ ಅಲೆವೂರಾಯ ವೇದಿಕೆಯಲ್ಲಿ ಅಳವಡಿಸಿದ ಬ್ಯಾನರ್ ನಲ್ಲಿ ತುಳು ಲಿಪಿಯನ್ನು ಬಳಸಿದ ಬಗ್ಗೆ ಸಮಾವೇಶದಬ್ಬಿ ಉತ್ತಮ ಸ್ಪಂದನ ದೊರೆತಿದೆ. ಈ ಬ್ಯಾನರ್ ಅನ್ನು ಬ್ರಹ್ಮಶ್ರೇ ಕುಂಟಾರು ವಾಸುದೇವ ತಂತ್ರಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಡಾ ರವಿಪ್ರಸಾದ್, ವಿಜಯರಾಜ ಪುಣಿಂಚಿತ್ತಾಯ ಸಹಿತ ಅನೇಕ ಮಂದಿ ಶಿವಳ್ಳಿ ಬ್ರಾಹ್ಮಣ ಸದಸ್ಯರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries