ನವದೆಹಲಿ: ಬಾಂಗ್ಲಾ ವಿಮೋಚನೆಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೇನೆ ಜಯಗಳಿಸಿದ್ದರ ಸ್ಮರಣಾರ್ಥ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಶನಿವಾರ ಇದೇ ಮೊದಲ ಬಾರಿಗೆ 'ವಿಜಯ ದಿವಸ್ ಕವಾಯಿತು' ಆಯೋಜಿಸಿತ್ತು.
ನವದೆಹಲಿ: ಬಾಂಗ್ಲಾ ವಿಮೋಚನೆಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೇನೆ ಜಯಗಳಿಸಿದ್ದರ ಸ್ಮರಣಾರ್ಥ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಶನಿವಾರ ಇದೇ ಮೊದಲ ಬಾರಿಗೆ 'ವಿಜಯ ದಿವಸ್ ಕವಾಯಿತು' ಆಯೋಜಿಸಿತ್ತು.
ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಗೌರವ ನಮನ ಸಲ್ಲಿಸಿದರು.
'ಗಡಿಭದ್ರತಾ ಪಡೆಯು ಇದೇ ಮೊದಲ ಬಾರಿಗೆ 'ವಿಜಯ ದಿವಸ್ ಪರೇಡ್' ಆಯೋಜಿದೆ. ಇದಕ್ಕೂ ಮುನ್ನ ಬೆಟಾಲಿಯನ್ ಮತ್ತು ಸೇನಾ ಘಟಕಗಳು ಮಾತ್ರ ಕಾರ್ಯಕ್ರಮ ಆಯೋಜಿಸಿ ಹುತಾತ್ಮರಿಗೆ ನಮನ ಸಲ್ಲಿಸುತ್ತಿದ್ದವು' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
1971ರ ಡಿಸೆಂಬರ್ 16ರಂದು ಪಾಕಿಸ್ತಾನದ 90,000 ಸೈನಿಕರು ಶರಣಾಗತಿಯಾಗುವ ಮೂಲಕ ಭಾರತವು ಯುದ್ಧದಲ್ಲಿ ಜಯ ಸಾಧಿಸಿತ್ತು. ಇದರ ಪರಿಣಾಮವಾಗಿ ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರದ ಉಗಮವಾಯಿತು. ಈ ವಿಜಯದ ಸ್ಮರಣಾರ್ಥ ಡಿ.16ರಂದು ಭಾರತ 'ವಿಜಯ ದಿವಸ್' ಆಚರಿಸುತ್ತದೆ.
ಯುದ್ಧದಲ್ಲಿ ಭಾರತದ ಬಿಎಸ್‌ಎಫ್‌ನ 125 ಸಿಬ್ಬಂದಿ ಹುತಾತ್ಮರಾಗಿದ್ದರು ಮತ್ತು 392 ಮಂದಿ ಗಾಯಗೊಂಡಿದ್ದರು.