ಕೊಟ್ಟಾಯಂ: ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದ ಕುರಿತು ಆರ್.ಎಸ್.ಎಸ್. ಅಖಿಲ ಭಾರತೀಯ ಕಾರ್ಯಕಾರಿ ಸಭೆಯ ಸಂತಾಪ ನಿರ್ಣಯವನ್ನು ಅವರ ಪುತ್ರ ಶಾಸಕ ಚಾಂಡಿ ಉಮ್ಮನ್ ಅವರಿಗೆ ಹಸ್ತಾಂತರಿಸಲಾಗಿದೆ.
ಆರ್.ಎಸ್.ಎಸ್. ದಕ್ಷಿಣ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಪಿ.ಎನ್.ಹರಿ ಕೃಷ್ಣನ್ ಅವರು ಪುತ್ತುಪಳ್ಳಿಯಲ್ಲಿರುವ ಚಾಂಡಿ ಉಮ್ಮನ್ ಅವರ ಮನೆಗೆ ತೆರಳಿ ನಿರ್ಣಯದ ಪ್ರತಿಯನ್ನು ಹಸ್ತಾಂತರಿಸಿದರು. ಆರ್ ಎಸ್ ಎಸ್ ಕೊಟ್ಟಾಯಂ ವಿಭಾಗ ಸಂಘಚಾಲಕ್ ಪಿ.ಪಿ.ಗೋಪಿ, ವಿಭಾಗ ಸಂಪರ್ಕ ಪ್ರಮುಖ್ ಎಂ.ವಿ.ಉಣ್ಣಿಕೃಷ್ಣನ್, ಬಾಲಗೋಕುಲಂ ತಾಲೂಕು ಅಧ್ಯಕ್ಷ ಪಿ.ಎಂ.ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.