ತ್ರಿಶೂರ್: ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಪ್ರಧಾನಿಗೆ ಕೇರಳದ ಮಹಿಳೆಯರ ಗೌರವವು ತ್ರಿಶೂರ್‍ನಲ್ಲಿ ಪ್ರತಿಫಲಿಸಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದರು. ಕೇರಳ ಕಾಂಗ್ರೆಸ್ ನ ಜೇಕಬ್ ಬಣದಿಂದ ಬಿಜೆಪಿಗೆ ಸೇರ್ಪಡೆಗೊಂಡ ನಾಯಕರಿಗೆ ಪಕ್ಷದ ಸದಸ್ಯತ್ವ ನೀಡಿ ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ತ್ರಿಶೂರ್ ಭೇಟಿ ಕೇರಳ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಬಹುದಾಗಿದ್ದು, ಮೋದಿ ಆಗಮನ ಐತಿಹಾಸಿಕ ಭೇಟಿಯಾಗಲಿದೆ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ. ತ್ರಿಶೂರ್‍ನಲ್ಲಿ ಆಯೋಜಿಸಲಾಗಿರುವ ಮಹಿಳಾ ಸಮಾವೇಶದಲ್ಲಿ ಕೇರಳದ ಮಹಿಳಾ ಸಮುದಾಯವನ್ನು ಪ್ರತಿನಿಧಿಸಲು ಕಲೆ, ಕ್ರೀಡೆ ಮತ್ತು ಸಾಂಸ್ಕøತಿಕ ಕ್ಷೇತ್ರಗಳ ಪ್ರಮುಖ ಮಹಿಳೆಯರು ಭಾಗವಹಿಸಲಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟಿಗ ಮಿನ್ನುಮಣಿ ಕೂಡ ಸಮ್ಮೇಳನದ ಭಾಗವಾಗಲಿದ್ದಾರೆ. ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಹೆಮ್ಮೆಯ ಚಿತ್ರನಟಿ ಶೋಭನಾ ಹಾಗೂ ಮಹಿಳಾ ಉದ್ಯಮಿ ಬೀನಾ ಕಣ್ಣನ್ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಸುರೇಂದ್ರನ್ ಮಾಹಿತಿ ನೀಡಿದರು. ನರೇಂದ್ರ ಮೋದಿಯವರ ತ್ರಿಶೂರ್ ಭೇಟಿಯ ಸಂದರ್ಭದಲ್ಲಿ ನೂರಾರು ಜನರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಅವರು ಹೇಳಿದರು.
ತ್ರಿಶೂರ್ ಜಿಲ್ಲಾ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಕಾಂಗ್ರೆಸ್ ನ ಜೇಕಬ್ ವಿಭಾಗದ ಜಿಲ್ಲಾ ಕಾರ್ಯದರ್ಶಿ ಮನೀಶ್ ಕುಮಾರ್ ಸೇರಿದಂತೆ ಹಲವರನ್ನು ಕೆ.ಸುರೇಂದ್ರನ್ ಬರಮಾಡಿಕೊಂಡರು. ಜಿಲ್ಲಾಧ್ಯಕ್ಷ ಕೆ.ಕೆ.ಅನಿಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.