ಕಾಸರಗೋಡು: ಉಲ್ಲಿಲಕೈ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಥಮಿಕ ಎಲ್‍ಪಿ ವಿದ್ಯಾರ್ಥಿಗಳು ಶಾಲೆಯಲ್ಲಿ ಕಿರುಧಾನ್ಯ ಬಳಸಿ ತಯಾರಿಸಿದ ಆಹಾರ ಪದಾರ್ಥಗಳ ಪ್ರದರ್ಶನ ಗಮನಸೆಳೆಯಿತು.
ಶಾಲಾ ಶಿಕ್ಷಕರು ಹಾಗೂ ಹೆತ್ತವರ ಸಹಕಾರದಿಂದ 100ಕ್ಕೂ ಹೆಚ್ಚು ಸಿಹಿತಿನಿಸುಗಳನ್ನು ಮಕ್ಕಳು ಶಾಲೆಯಲ್ಲಿ ಪ್ರದರ್ಶನಕ್ಕಿಟ್ಟರು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಿರುಧಾನ್ಯಗಲ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಧ್ಯಯನದ ಜೊತೆಗೆ ಶಾಲೆಗಳಲ್ಲಿ ಅಳವಡಿಸಲಾಗಿರುವ ವೈವಿಧ್ಯೀಕರಣದ ಭಾಗವಾಗಿ ಪಲಹಾರ ಮೇಳವನ್ನು ಆಯೋಜಿಸಲಾಗಿತ್ತು. ಕಿರುಧಾನ್ಯಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಶಾಲಾ ಪಿಟಿಎ ಅಧ್ಯಕ್ಷ ಎಂ.ರಾಜಕುಮಾರ್ ಆಹಾರ ಮೇಳ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ಎನ್.ಅಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ಕಾರ್ಯದರ್ಶಿ ಕೆ.ಶಾಂತಿ, ಕೆ.ಶೀಜಾ, ಎಂ.ರೇಷ್ಮಾ, ಪಿ.ತ್ರಿವೇಣಿ, ಕೆ.ಜಲಜಾ, ಎಂ.ಲಿಜಿತಾ ಆಹಾರ ಮೇಳ ಪ್ರದರ್ಶನದ ನೇತೃತ್ವ ವಹಿಸಿದ್ದರು. ಆಡಳಿತ ಭಾಷಾ ದಿನಾಚರನೆ ಅಂಗವಾಗಿ ಮಾತೃಭಾಷಾ ಪಠನ, ಮಾತೃಭಾಷೆ ಕ್ಯಾಲೆಂಡರ್ ಬಿಡುಗಡೆ ಹಾಗೂ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಿತು.