ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಜಗದ್ಗುರುಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್(ರಿ), ರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್ ಮತ್ತು ಮುಂಬಯಿಯ ದಿನೇಶ್ ಬಾಹ್ರಾ ಫೌಂಡೇಶನ್‍ಸಹಯೋಗದಲ್ಲಿ ಪಶುಪಾಲನೆಯವರಿಗಾಗಿ ಗೋ ಹೋಮಿಯೋಪತಿ ಪ್ರಥಮ ಚಿಕಿತ್ಸೆ ಮತ್ತು ಮಾಹಿತಿಶಿಬಿರವನ್ನು ಪರಮಪೂಜ್ಯಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು.
ಮಂಗಳೂರಿನ ಖಾಸಗಿಪಶುವೈದ್ಯರಾದ ಡಾ. ಮನೋಹರ ಉಪಾಧ್ಯಾಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ 'ಗೋವುಗಳಿಗೆ ಹೋಮಿಯೋಪತಿ ಚಿಕಿತ್ಸೆ ಯಾವ ರೀತಿ ಕಡಿಮೆ ಖರ್ಚಿನಲ್ಲಿ ಉತ್ತಮ ಉಪಯೋಗಿಕಾರಿಯಾಗಿದೆ' ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಗೋವಿನ ಹಾಲುಸೇವಿಸಿ ಬೆಳೆಯುವ ನಾವು ಅದರ ಪಾಲನೆ-ಪೋಷಣೆಮಾಡಲು ಬದ್ಧರಾಗಬೇಕು. ವೈದ್ಯರು ತಿಳಿಸಿದ ಮಾಹಿತಿಯನ್ನು ನಾವು ಬಳಸಿ ಗೋವಿನ ನೋವನ್ನು ಗುಣಪಡಿಸಿಧನ್ಯರಾಗೋಣ ಎಂದು ತಿಳಿಸಿದರು. ಕಾಮದುಘಾ ಟ್ರಸ್ಟ್‍ನ ಅಧ್ಯಕ್ಷ,ಬದಿಯಡ್ಕದ ಖಾಸಗಿ ಪಶುವೈದ್ಯರಾದ ಡಾ.ವೈ.ವಿ.ಕೃಷ್ಣಮೂರ್ತಿಯವರು ಶಿಬಿರದ ಕುರಿತು ಪ್ರಾಸ್ತಾವಿಕನುಡಿಗಳನ್ನಾಡಿದರು. ಕಾಸರಗೋಡು ಜಿಲ್ಲೆಯ ನಿವೃತ್ತಪಶುವೈದ್ಯಾಧಿಕಾರಿ ಡಾ.ಜಯಪ್ರಕಾಶ್ ಲಾಡ ಉಪಸ್ಥಿತರಿದ್ದರು. ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ ಹಾಡಿದರು. ಸದಾಶಿವ ಮೋಂತಿಮಾರು ಸ್ವಾಗತಿಸಿದರು. ಗಂಗಾಧರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು. ದಿನಕರ ಹೊಸಂಗಡಿ ವಂದಿಸಿದರು.