ನವದೆಹಲಿ: 2024 ಲೋಕಸಭೆ ಚುನಾವಣೆಗಳ ಸೆಮಿಫೈನಲ್ ಎಂದೇ ಪರಿಗಣಿತವಾಗಿರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆದ್ದು ಅಧಿಕಾರ ರಚಿಸಲು ಸಿದ್ಧವಾಗುತ್ತಿದ್ದರೆ, ಕಾಂಗ್ರೆಸ್ ಪಕ್ಷವು ಒಂದು ರಾಜ್ಯದಲ್ಲಿ ಪ್ರಾಬಲ್ಯ ಸಾಧಿಸಿದೆ.
ಈ ಫಲಿತಾಂಶದ ವಿಶೇಷವೆಂದರೆ, ಯಾವುದೇ ಪಕ್ಷಾಂತರ, ಆಮಿಷ ಅಥವಾ ಆಪರೇಶನ್ - ಇಲ್ಲದೆಯೇ ಪಕ್ಷಗಳು ಸರಕಾರ ರಚಿಸಲು ಅವಕಾಶವಿದೆ.
ಇದುವರೆಗಿನ ಮಾಹಿತಿಯ ಪ್ರಕಾರ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ - ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಳವಾಗಿದೆ.. ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ.
ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಹೆಚ್‌ಆರ್‌ಎಸ್) ಆಘಾತ ಅನುಭವಿಸಿದ್ದರೆ ಕಾಂಗ್ರೆಸ್ ಅದ್ಭುತ ಗೆಲುವು ದಾಖಲಿಸಿದೆ. ಇಲ್ಲಿ ಕಾಂಗ್ರೆಸ್ INC 64 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಿಆರ್‌ಎಸ್ 39 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿದೆ. ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಓವೈಸಿ ನೇತೃತ್ವದ ಎಐಎಂಐಎಂ 7ರಲ್ಲಿ ಗೆದ್ದಿದೆ. ಸಿಪಿಐ 1. ಒಟ್ಟು ಸ್ಥಾನ 119, ಬಹುಮತಕ್ಕೆ 60.
ಛತ್ತೀಸಗಢದಲ್ಲಿ ಕಾಂಗ್ರೆಸ್ ಪಕ್ಷವು ಅಚ್ಚರಿಯ ಸೋಲು ಕಂಡಿದೆ. ಇಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಬರಬಹುದು ಎಂದಿದ್ದವು. ಆದರೆ ಸಮೀಕ್ಷೆಗಳು ತಲೆಕೆಳಗಾಗಿ ಬಿಜೆಪಿ 54 ರಲ್ಲಿ ಹಾಗೂ ಕಾಂಗ್ರೆಸ್ 36 ರಲ್ಲಿ ಗೆದ್ದಿದೆ. ಜಿಜಿಪಿ1. ಒಟ್ಟು ಸ್ಥಾನ 90, ಬಹುಮತಕ್ಕೆ 46.
ರಾಜಸ್ಥಾನದಲ್ಲಿ ಸಂಪ್ರದಾಯದಂತೆ ಈ ಸಾರಿ ಕಾಂಗ್ರೆಸ್ ಬದಲಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. 199 ಸ್ಥಾನಗಳಲ್ಲಿ ಬಿಜೆಪಿ 115, ಕಾಂಗ್ರೆಸ್ 69, ಐಎನ್‌ಡಿ 8, ಭಾರತ್ ಆಧಿವಾಸಿ 3, ಬಿಎಸ್‌ಪಿ 2. ಬಹುಮತಕ್ಕೆ 100.
ಮಧ್ಯಪ್ರದೇಶದಲ್ಲಿ ಬಿಜೆಪಿಯು ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 230 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 164 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ 65ರಲ್ಲಿ ಗೆದ್ದರೆ, ಭಾರತ್ ಆದಿವಾಸಿ 1 ಸ್ಥಾನ ಗೆದ್ದಿದೆ. ಬಹುಮತಕ್ಕೆ 116.
*ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ.
90 ಕ್ಷೇತ್ರಗಳ ಪೈಕಿ ಬಿಜೆಪಿ 54, ಕಾಂಗ್ರೆಸ್ 36 ಕ್ಷೇತ್ರಗಳಲ್ಲಿ ಜಯ/ಮುನ್ನಡೆ. ಇಲ್ಲಿ ಸರಕಾರ ರಚನೆಗೆ ಬೇಕಿರುವ ಸ್ಥಾನಗಳ ಸಂಖ್ಯೆ 46. ಮುಖ್ಯಾಂಶಗಳು ಇಲ್ಲಿವೆ.ಛತ್ತೀಸಗಢ ಚುನಾವಣಾ ಫಲಿತಾಂಶ 2023230 ಕ್ಷೇತ್ರಗಳ ಪೈಕಿ ಬಿಜೆಪಿ 166, ಕಾಂಗ್ರೆಸ್ 63, ಇತರರು 1 ಕ್ಷೇತ್ರಗಳಲ್ಲಿ ಮುನ್ನಡೆ. ಇಲ್ಲಿ ಸರಕಾರ ರಚನೆಗೆ ಬೇಕಿರುವ ಸ್ಥಾನಗಳು 116. ಮುಖ್ಯಾಂಶಗಳು ಇಲ್ಲಿವೆ.ಮಧ್ಯಪ್ರದೇಶ ಚುನಾವಣಾ ಫಲಿತಾಂಶ 2023199 ಕ್ಷೇತ್ರಗಳ ಪೈಕಿ ಬಿಜೆಪಿ 115ರಲ್ಲಿ, ಕಾಂಗ್ರೆಸ್ 69, ಸ್ವತಂತ್ರರು 7, ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆ. ಸರಕಾರ ರಚನೆಗೆ ಬೇಕಿರುವ ಮ್ಯಾಜಿಕ್ ಸಂಖ್ಯೆ 100. ಮುಖ್ಯಾಂಶಗಳು ಇಲ್ಲಿವೆ.ರಾಜಸ್ಥಾನ ಚುನಾವಣಾ ಫಲಿತಾಂಶ 2023119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 63 ಕ್ಷೇತ್ರಗಳಲ್ಲಿ, ಬಿಆರ್‌ಎಸ್ 40, ಬಿಜೆಪಿ 9, ಎಐಎಂಐಎಂ 6, ಸಿಪಿಐ 1 ಕ್ಷೇತ್ರಗಳಲ್ಲಿ ಮುನ್ನಡೆ. ಸರಕಾರ ರಚಿಸಲು ಬೇಕಿರುವ ಸ್ಥಾನಗಳ ಸಂಖ್ಯೆ 60.ಮುಖ್ಯಾಂಶಗಳು ಇಲ್ಲಿವೆ.ತೆಲಂಗಾಣ ಚುನಾವಣಾ ಫಲಿತಾಂಶ 2023