HEALTH TIPS

ಸೈಬರ್ ಅಪರಾಧಗಳ ಪತ್ತೆ: ದೆಹಲಿ ಪೊಲೀಸ್ ಆಯುಕ್ತರ ಭೇಟಿ ಮಾಡಿದ FBI ನಿರ್ದೇಶಕ

                ವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪಿಡುಗಾಗಿರುವ ತಂತ್ರಜ್ಞಾನ ಆಧಾರಿತ ಅಪರಾಧಗಳನ್ನು ಎದುರಿಸುವ ಸವಾಲು ಹಾಗೂ ಸೈಬರ್ ಅಪರಾಧಗಳನ್ನು ಭೇದಿಸಲು ಅಗತ್ಯವಿರುವ ಸಹಕಾರ ಕುರಿತು ಎಫ್‌ಬಿಐ ನಿರ್ದೇಶಕ ಕ್ರಿಷ್ಟೋಫರ್ ಎ. ವ್ರೇ ಅವರು ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರನ್ನು ಮಂಗಳವಾರ ಭೇಟಿಯಾಗಿ ಚರ್ಚಿಸಿದರು.

              'ಎರಡೂ ರಾಷ್ಟ್ರಗಳ ತನಿಖಾ ಸಂಸ್ಥೆಗಳು ಪ್ರತ್ಯೇಕ ಕಾನೂನುಗಳನ್ನು ಹೊಂದಿವೆ. ಇಂಥ ಸಂದರ್ಭದಲ್ಲಿ ಇರುವ ಸಾಧ್ಯತೆ, ಸವಾಲು ಹಾಗೂ ವ್ಯವಸ್ಥೆ ಕುರಿತು ಉಭಯ ಸಂಸ್ಥೆಗಳ ಸಹಕಾರ ಕುರಿತು ಚರ್ಚಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು' ಎಂದು ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

                   'ಅಂತರರಾಷ್ಟ್ರೀಯ ಅಪರಾಧಗಳ ವಿಷಯದಲ್ಲಿ ಅಪರಾಧಿಗಳ ಮಾಹಿತಿಯನ್ನು ಹಂಚಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಪರಾಧಿಗಳು ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲದಂತೆ ಮಾಡಲು ಹಾಗೂ ಬೇರೆ ಯಾವುದೇ ದೇಶದಲ್ಲಿ ಅಡಗಿಕೊಳ್ಳದಂತೆ ಎಚ್ಚರ ವಹಿಸುವ ಅಗತ್ಯವಿದೆ. ಇದರಲ್ಲಿ ದೆಹಲಿ ಪೊಲೀಸರು ಹಾಗೂ ಎಫ್‌ಬಿಐ ನಡುವಿನ ಸಹಕಾರ ಅಗತ್ಯ' ಎಂದು ವ್ರೇ ಹೇಳಿದ್ದಾರೆ.

                   ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಸೋಮವಾರ ಭೇಟಿ ನೀಡಿ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಸಿಖ್‌ ಪ್ರತ್ಯೇಕತಾವಾದಿಗಳಾದ ಖಲಿಸ್ತಾನಿಗಳ ಕುರಿತ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕ್ರಿಸ್ಟೋಫರ್ ಅವರಿಗೆ ಸೂದ್ ಮನವಿ ಮಾಡಿಕೊಂಡರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries