ಅನೇಕ ಜನರು ವೈಯಕ್ತಿಕ ಮತ್ತು ಇತರ ಉದ್ದೇಶಗಳಿಗಾಗಿ ಗೂಗಲ್ ಅನ್ನು ಅವಲಂಬಿಸಿದ್ದಾರೆ. ಆದರೆ ಇದೀಗ ಕಂಪನಿಯು ಗೂಗಲ್ ನಲ್ಲಿ ಗಂಭೀರವಾದ ಭದ್ರತಾ ಲೋಪವನ್ನು ಕಂಡುಹಿಡಿದು ಅದನ್ನು ಸರಿಪಡಿಸಿದೆ ಎಂದು ಘೋಷಿಸಿದೆ.
ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ ಸೆಕ್ಯುರಿಟಿ ಫೀಚರ್ ಅಪ್‍ಡೇಟ್ ಕೂಡ ಬಿಡುಗಡೆ ಮಾಡಿದೆ. ಕಂಪನಿಯು 85 ಭದ್ರತಾ ನ್ಯೂನತೆಗಳನ್ನು ಸಹ ಸರಿಪಡಿಸಿದೆ.
ಕಂಪನಿಯು ಗೂಗಲ್ ನಲ್ಲಿ ಗಂಭೀರವಾದ ಭದ್ರತಾ ದೋಷಗಳನ್ನು ಕಂಡುಹಿಡಿದಿದೆ. ಬಳಕೆದಾರರ ಜ್ಞಾನ ಅಥವಾ ಅನುಮತಿಯಿಲ್ಲದೆ ಪೋನ್ ಗಳನ್ನು ಹ್ಯಾಕ್ ಮಾಡಲು ಹ್ಯಾಕರ್‍ಗಳಿಗೆ ಅನುಮತಿಸುವ ಭದ್ರತಾ ಲೋಪಗಳನ್ನು ಪತ್ತೆಮಾಡಲಾಗಿದೆ. ಗೂಗಲ್ ಈಗ ಭದ್ರತಾ ದೋಷವನ್ನು ಸರಿಪಡಿಸಿದೆ ಮತ್ತು ಸಾಧ್ಯವಾದಷ್ಟು ಬೇಗ ಅಪ್ಲಿಕೇಶನ್ ಅನ್ನು ನವೀಕರಿಸಲು ಬಳಕೆದಾರರಿಗೆ ಸಲಹೆ ನೀಡಿದೆ.