HEALTH TIPS

Lok Sabha Security Breach: ಲೋಕಸಭೆಯಲ್ಲಿ ಆಗಿದ್ದೇನು? ‍ಬಂಧಿತರು ಯಾರೆಲ್ಲಾ?

Top Post Ad

Click to join Samarasasudhi Official Whatsapp Group

Qries

            ವದೆಹಲಿ: ಕಲಾಪ ನಡೆಯುತ್ತಿರುವ ವೇಳೆಯೇ ಭದ್ರತಾ ಲೋಪಕ್ಕೆ ಲೋಕಸಭೆ ಬುಧವಾರ ಸಾಕ್ಷಿಯಾಯಿತು. ಪ್ರೇಕ್ಷಕರ ಗ್ಯಾಲರಿಯಿಂದ ಹಾರಿದ ಇಬ್ಬರು ಆಗಂತುಕರು, ಹಳದಿ ಬಣ್ಣದ ಹೊಗೆ ಎರಚಿ ಆತಂಕ ಸೃಷ್ಟಿಸಿದರು. ಅದರಲ್ಲಿ ಒಬ್ಬ ಸಂಸದರು ಕುಳಿತುಕೊಳ್ಳುವ ಮೇಜುಗಳ ಮೇಲೆಯೇ ಓಡುವ ದೃಶ್ಯ ಲೋಕಸಭೆಯ ಕಲಾಪದ ವಿಡಿಯೊದಲ್ಲಿ ದಾಖಲಾಗಿದೆ.

                   9 ಜನರ ಸಾವಿಗೆ ಕಾರಣವಾಗಿದ್ದ 2001ರ ಸಂಸತ್‌ ದಾಳಿಗೆ 22 ವರ್ಷ ತುಂಬಿದ ದಿನವೇ ಈ ಘಟನೆ ನಡೆದಿದೆ. ಹಳದಿ ಬಣ್ಣದ ಹೊಗೆ ಕಂಡು ಲೋಕಸಭೆಯಲ್ಲಿ ಹಾಜರಿದ್ದ ಸಂಸದರು ಭೀತಿಗೊಂಡಿದ್ದರು.

ಆಗಿದ್ದೇನು?

  •                 ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಆಗಂತುಕರು ಕೆಳಗೆ ಧುಮುಕಿ, ಹಳದಿ ಹೊಗೆ ಹಾರಿಸಿದ್ದಾರೆ.

  •                 ಸಾರ್ವಜನಿಕರ ಗ್ಯಾಲರಿ-4ರಿಂದ ಆಗಂತುಕರು ಕೆಳಗೆ ಹಾರಿದ್ದಾರೆ.

  •                ಮಧ್ಯಾಹ್ನ ಸುಮಾರು 1 ಗಂಟೆಗೆ ಈ ಘಟನೆ ನಡೆದಿದ್ದು, ಈ ವೇಳೆ ಶೂನ್ಯವೇಳೆ ಪ್ರಗತಿಯಲ್ಲಿತ್ತು.

  •                 ಈ ವೇಳೆ 'ಸರ್ವಾಧಿಕಾರ ನಡೆಯುವುದಿಲ್ಲ' ಎಂದು ಆಗಂತುಕರು ಘೋಷಣೆ ಕೂಗಿದ್ದಾರೆ.

  • ಒಳನುಗ್ಗಿ ಬಂದವರನ್ನು ಸಂಸದರು ಹಾಗೂ ಲೋಕಸಭೆ ಸಿಬ್ಬಂದಿ ಸೇರಿ ಸೆರೆಹಿಡಿದಿದ್ದಾರೆ.

  • ನಂತರ ಅವರಿಗೆ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಲಾಯಿತು

  •                ಆಗಂತುಕರಲ್ಲಿ ಓರ್ವನಾದ ಸಾಗರ್ ಶರ್ಮಾ ಅವರಿಗೆ ಮೈಸೂರು ಲೋಕಸಭಾ ಸಂಸದ ಪ್ರತಾಪ್ ಸಿಂಹ ಪಾಸ್‌ ನೀಡಿದ್ದರು.

  •                   ಇನ್ನೊಬ್ಬ ಆಗಂತುಕನನ್ನು ಮನೋರಂಜನ್ ಎಂದು ಗುರುತಿಸಲಾಗಿದೆ.

  • ದೆಹಲಿ ಪೊಲೀಸ್ ಕಮೀಷನರ್‌ ಸಂಜಯ್ ಅರೋರಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

        ಸಂಸತ್ ಭವನದ ಹೊರಗೂ ಪ್ರತಿಭಟನೆ

               ಸಂಸತ್‌ ಭವನದ ಹೊರಗೂ ಹೊಗೆ ಹಾರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದ ಓರ್ವ ಮಹಿಳೆ ಹಾಗೂ ಪುರಷನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

                 ಹರಿಯಾಣದ ಹಿಲ್ಸಾರ್‌ನ ನೀಲಂ (42) ಹಾಗೂ ಮಹಾರಾಷ್ಟ್ರದ ಲಾತೂರ್‌ನ ಅಮೊಲ್ ಶಿಂಧೆ (25) ಬಂಧಿತರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries