HEALTH TIPS

ಕುಂಜತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭೂತಬಲಿ ಉತ್ಸವ sಸಂಪನ್ನ

                      ಮಂಜೇಶ್ವರ : ಕೇರಳ ಕರ್ನಾಟಕ ಗಡಿ ಪ್ರದೇಶವಾದ ಕುಂಜತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ 3 ದಿನಗಳಿಂದ ನಡೆಯುತಿದ್ದ ಭೂತ ಬಲಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಗಳು ಬಹಳ ವಿಜೃಂಭನೆಯಿಂದ ಸಂಪನ್ನಗೊಂಡಿತು.

              ಅತ್ಯಂತ ಪ್ರಾಚೀನವಾದ ಸರಿ ಸುಮಾರು 1000 ಕ್ಕೂ ಮಿಗಿಲಾದ ಇತಿಹಾಸವಿರುವ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟ ಈ ದೇವಸ್ಥಾನದ ಭೂತ ಬಲಿ ಉತ್ಸವಕ್ಕೆ ಕಾಸರಗೋಡು - ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿದೆ.

                     ಡಿಸೆಂಬರ್ 15 ರಂದು  ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಶ್ರೀ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ   ಶ್ರೀ ಗುರು ದೇವಾನಂದ ಸ್ವಾಮೀಜಿ ಒಡಿಯೂರು ರವರ ಆಶೀರ್ವಚನದೊಂದಿಗೆ ದೇವಸ್ಥಾನ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ದೇವಸ್ಥಾನದ ಅಧೀನದಲ್ಲಿರುವ ವಿದ್ಯಾನಿಕೇತನ ವಿಧ್ಯಾಭ್ಯಾಸ ಸಂಸ್ಥೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಭಜನಾ ಮಂದಿರ ಅಧ್ಯಕ್ಷ ದಾಮೋದರ, ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ಯೋಗೀಶ್ ಆಳ್ವ, ಪವಿತ್ರಪಾಣಿ ಕೃಷ್ಣ ಭಟ್ ಹಾಗೂ ಮೊಕ್ತೇಸರ ರವೀಂದ್ರ ರಾವ್ ಮೊದಲಾದವರ ನೇತೃತ್ವದಲ್ಲಿ ಭೂತ ಬಲಿ ಉತ್ಸವಕ್ಕೆ ಚಾಲನೆ ದೊರಕಿದೆ.

                ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರವೀಂದ್ರನಾಥ್ ರೈ, ಮೋಹನದಾಸ ರೈ, ಸೌಂದರ್ಯ ಮಂಜಪ್ಪ, ಸಮೀರ್ ಪುರಾಣಿಕ್, ಪ್ರಶಾಂತ್ ನಾಯ್ಕ್, ಜಯಪ್ರಕಾಶ್ ತೊಟ್ಟತ್ತೋಡಿ, ಶ್ರೀನಿವಾಸ ಶೆಟ್ಟಿ ಹಾಗೂ ಅಜೇಯ ಪದ್ಮಜೀತ್ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

                   ಡಿ. 16 ರಂದು ಪಂಚಾಮೃತಭಿμÉೀಕ, ಸಿಯಾಳಭಿμÉೀಕ, ಶತರುದ್ರಾಭಿμÉೀಕ, ಅಭಿμÉೀಕ ಪೂಜೆ, ನವಶಕಲಶಾಭಿμÉೀಕ, ಮಹಾಪೂಜೆ, ನಿತ್ಯಬಲಿ, ಶ್ರೀ ದೇವರ ಬಯ್ಯನ ಬಲಿ, ವಸಂತ ಕಟ್ಟೆ ಪೂಜೆ, ಅಶ್ವತ ಕಟ್ಟೆ ಪೂಜೆ, ಶ್ರೀ ದೇವರಿಗೆ ರಂಗ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.

            ಅದೇ ದಿನ ರಾತ್ರಿ ಉದ್ಯಾವರ ಶ್ರೀ ಭಗವತೀ ಅಮ್ಮನವರ ಬೇಟಿ ನಡೆಯಿತು. ಈ ಸಂದರ್ಭ ಭಾರೀ ಸಂಖ್ಯೆಯಲ್ಲಿ ಭಕ್ತಾಭಿನಿಗಳು ಸೇರಿ ದೇವರ ಆಶೀರ್ವದವನ್ನು ಪಡಕೊಂಡರು.

                    ಕೊನೆಯ ದಿನವಾದ ಡಿ. 17 ಭಾನುವಾರದಂದು ದರ್ಶನ ಬಲಿ ಹಾಗೂ ಉದ್ಯಾವರ ಶ್ರೀ ದೈವಗಳ ಬೇಟಿ ಮತ್ತು ಬಟ್ಲು ಕಾಣಿಕೆ ಹಾಗೂ ಮಹಾ ಪ್ರಸಾದ ನಡೆಯಿತು. ಮೂರು ದಿನಗಳ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ, ನಾಟಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ  ನಡೆಯಿತು.


     


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries