ನವದೆಹಲಿ: ಹೊಸವರ್ಷಕ್ಕೆ ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು ಗ್ರಾಹಕರ ಕೈ ಸುಡುವಂತಾಗಿದೆ.
ಮಂಗಳವಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂಪಾಯಿ ಆಗಿದ್ದು ಆ ಮೂಲಕ 64,090 ರೂಪಾಯಿಗೆ ಏರಿಕೆಯಾಗಿದೆ.
ಅಂದರೆ ಮಂಗಳವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 58,750 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ರೂ. 10 ಗ್ರಾಂಗೆ 64,090 ರೂಪಾಯಿಗೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 58,550 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ರೂ. 10 ಗ್ರಾಂಗೆ 63,870 ರೂಪಾಯಿ ಇತ್ತು.
ಚಿನ್ನದ ಶುದ್ಧತೆಯನ್ನು ಗುರುತಿಸುವುದು ಹೇಗೆ?
(ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್) ಚಿನ್ನದ ಶುದ್ಧತೆಯನ್ನು ಗುರುತಿಸಲು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ ಮೂಲಕ ಹಾಲ್ ಮಾರ್ಕ್ಗಳನ್ನು ನೀಡಲಾಗುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್‌ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾಗಿದೆ. ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಕೆಲವರು 18 ಕ್ಯಾರೆಟ್‌ಗಳನ್ನು ಸಹ ಬಳಸುತ್ತಾರೆ. ಕ್ಯಾರೆಟ್ 24 ಅನ್ನು ಮೀರುವುದಿಲ್ಲ ಮತ್ತು ಹೆಚ್ಚಿನ ಕ್ಯಾರೆಟ್ ಚಿನ್ನವು ಶುದ್ಧವಾಗಿರುತ್ತದೆ.
22 ಮತ್ತು 24 ಕ್ಯಾರೆಟ್ ಚಿನ್ನದ ನಡುವಿನ ವ್ಯತ್ಯಾಸ
24 ಕ್ಯಾರೆಟ್ ಚಿನ್ನವು 99.9 ಪ್ರತಿಶತ ಶುದ್ಧವಾಗಿರುತ್ತದೆ ಮತ್ತು 22 ಕ್ಯಾರೆಟ್ ಚಿನ್ನವು ಸರಿಸುಮಾರು 91 ಪ್ರತಿಶತ ಶುದ್ಧವಾಗಿದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತು ಮುಂತಾದ ಇತರ ಲೋಹಗಳನ್ನು ಶೇ.9 ರಷ್ಟು ಮಿಶ್ರಣ ಮಾಡಿ ಆಭರಣಗಳನ್ನು ತಯಾರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಅತ್ಯಂತ ಶುದ್ಧವಾಗಿದ್ದರೂ, 24 ಕ್ಯಾರೆಟ್ ಚಿನ್ನದಿಂದ ಆಭರಣವನ್ನು ಮಾಡಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಆದ್ದರಿಂದ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್‌ನಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಾರೆ.