ಪೆರ್ಲ: ನವೋತ್ಥಾನ ಚರಿತ್ರೆಯನ್ನು ಬಿಂಬಿಸುವ ವೈಕಂ ಸತ್ಯಾಗ್ರಹದ 100ನೇ ವಾರ್ಷಿಕದಂಗವಾಗಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ವತಿಯಿಂದ ವಿಚಾರ ಸಂಕಿರಣ ಹಾಗೂ ವಾಚನಾ ಸ್ಪರ್ಧೆಗಳ ಬಹುಮಾನ ವಿತರಣೆ ಪೆರ್ಲದ ಎಣ್ಮಕಜೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಜರಗಿತು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ವಿಚಾರ ಸಂಕಿರಣ ಉದ್ಘಾಟಿಸಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲ ಕೆ. ಅಧ್ಯಕ್ಷತೆ ವಹಿಸಿದ್ದರು. ದೇಶಿಯ ಮಟ್ಟದ ಚರಿತ್ರೆಯಲ್ಲಿ ಅತೀ ಸುದೀರ್ಘ ಹಾಗೂ ಶೋಷಿತ ವರ್ಗದ ಇತಿಹಾಸವನ್ನು ಬಿಂಬಿಸುವ ವೈಕಂ ಸತ್ಯಾಗ್ರಹದ ಮಹತ್ವದ ಬಗ್ಗೆ ಹೊಸದುರ್ಗ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ವೇಣು ಗೋಪಾಲ ವಿಚಾರ ಮಂಡಿಸಿದರು.
ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ.ಅಹಮ್ಮದ್ ಹುಸೈನ್ ಮಾಸ್ತರ್, ಯು ಶ್ಯಾಮ್ ಭಟ್, ಕಾಸರಗೋಡು ಲೈಬ್ರರಿ ಕೌನ್ಸಿಲ್ ಸದಸ್ಯ ಸುಧಾಕರ ಮಾಸ್ತರ್, ಉದಯ ಸಾರಂಗ್ ಪೆರ್ಲ, ಲೈಬ್ರರಿ ಪಂಚಾಯತಿ ಸಮಿತಿ ಅಧ್ಯಕ್ಷ ಸಲಾವುದ್ದೀನ್ ಮಾಸ್ತರ್, ರಾಮಕೃಷ್ಣ ರೈ ಕುದ್ವ , ವೈ ನಾರಾಯಣ ಮೊದಲಾದವರು ಮಾತನಾಡಿದರು. ಶ್ರೀಕುಮಾರಿ ಟೀಚರ್ ಬಹುಮಾನ ವಿಜೇತರ ಪರಿಚಯ ವಾಚಿಸಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ರಾಮಚಂದ್ರ ಮೊಳಕ್ಕಾಲು ವಂದಿಸಿದರು.