ಎರ್ನಾಕುಳಂ: ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಕುಸ್ಯಾಟ್ ದುರಂತದ ಕುರಿತು ಪೆÇಲೀಸರ ವಿವರಣಾತ್ಮಕ ವರದಿ ಹೊರಬಿದ್ದಿದೆ.
1,000 ಮಂದಿಗೆ ಮಾತ್ರ ಅವಕಾಶವಿದ್ದ ಸಭಾಂಗಣದಲ್ಲಿ 4,000 ಜನರನ್ನು ಕೂಡಿ ಹಾಕಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೋಲೀಸರು ಹೈಕೋರ್ಟ್‍ಗೆ ಮಾಹಿತಿ ನೀಡಿದ್ದಾರೆ. ಕಾಲೇಜಿನ ಆವರಣದ ಹೊರಗಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ದುರಂತದ ಆವೇಗವನ್ನು ಹೆಚ್ಚಿಸಿದರು.
ವರದಿಯ ಪ್ರಕಾರ, ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಕಾಲೇಜಿನ ಕಡೆಯಿಂದ ಗಂಭೀರ ವೈಫಲ್ಯ ಕಂಡುಬಂದಿದೆ. ಅಪಘಾತಕ್ಕೆ ಕಾರಣ ಸಂಘಟನೆಯಲ್ಲಿನ ತಪ್ಪು ಮತ್ತು ಜನಸಂದಣಿ ನಿಯಂತ್ರಣದಲ್ಲಿ ಅನುಭವದ ಕೊರತೆ ಕಂಡುಬಂದಿದೆ. ಸಭಾಂಗಣಕ್ಕೆ ತೆರಳುವ ಮೆಟ್ಟಿಲುಗಳ ನಿರ್ಮಾಣದಲ್ಲಿನ ದೋಷವೂ ಅಪಘಾತಕ್ಕೆ ಕಾರಣವಾಗಿದೆ. ದಟ್ಟಣೆ ನಿಯಂತ್ರಿಸಲು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಲ್ಲ ಎಂದೂ ವರದಿ ಹೇಳಿದೆ.
ನವೆಂಬರ್ 25 ರಂದು, ಕುಸಾಟ್ ನಲ್ಲಿ ದುರಂತ ಸಂಭವಿಸಿತ್ತು. ಟೆಕ್ ಫೆಸ್ಟ್ ವೇಳೆ ನೂಕುನುಗ್ಗಲು ಉಂಟಾಗಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಎರಡು ದಿನಗಳ ಟೆಕ್ ಫೆಸ್ಟ್ ನ ಸಮಾರೋಪ ದಿನದಂದು ಈ ದಾರುಣ ಘಟನೆ ನಡೆದಿತ್ತು. ಕಾಲ್ತುಳಿತದಲ್ಲಿ ಉಸಿರುಗಟ್ಟಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.