ತ್ರಿಶೂರ್: ಆನ್‍ಲೈನ್ ಶಾಪಿಂಗ್ ನೆಪದಲ್ಲಿ ಹೈರಿಚ್ ಕಂಪನಿ ಕೋಟಿ ಕೋಟಿ ವಂಚನೆ ಮಾಡಿದೆ ಎಂದು ಪೋಲೀಸರು ತಿಳಿಸಿದ್ದಾರೆ. ವರದಿ ಪ್ರಕಾರ ಕಂಪನಿಯು 1,630 ಕೋಟಿ ರೂಪಾಯಿ ವಂಚನೆ ಮಾಡಿದೆ.
ಇದೊಂದು ದೊಡ್ಡ ವಂಚನೆಯಾಗಿರುವುದರಿಂದ ಹೆಚ್ಚಿನ ತನಿಖೆಗಾಗಿ ಉನ್ನತ ತನಿಖಾ ಸಂಸ್ಥೆಗಳಿಗೆ ಪ್ರಕರಣವನ್ನು ಹಸ್ತಾಂತರಿಸುವಂತೆಯೂ ವರದಿಯಲ್ಲಿ ಕೋರಲಾಗಿದೆ.
ಆನ್ ಲೈನ್ ಶಾಪಿಂಗ್ ನೆಪದಲ್ಲಿ ಹೈರಿಚ್ ಕಂಪನಿ ಯಾವುದೇ ನಿಯಮಗಳನ್ನು ಪಾಲಿಸದೆ ಹಲವರಿಗೆ ಶುಲ್ಕ ವಿಧಿಸಿದೆ. ಕೋಝಿಕ್ಕೋಡ್ ಮೂಲದವರ ದೂರಿನ ಆಧಾರದ ಮೇಲೆ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ಇದಕ್ಕೂ ಮುನ್ನ ಹೈರಿಚ್ ಎಂಬ ಸಂಸ್ಥೆ 126 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದನ್ನು ಜಿಎಸ್ ಟಿ ಇಲಾಖೆ ಪತ್ತೆ ಹಚ್ಚಿತ್ತು. ಇದಾದ ಬಳಿಕ ಸಂಸ್ಥೆಯ ನಿರ್ದೇಶಕರನ್ನೂ ಬಂಧಿಸಲಾಗಿತ್ತು. ನಂತರದ ತನಿಖೆಯಲ್ಲಿ 1000 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆದಿರುವುದು ಪೋಲೀಸರು ಪತ್ತೆಮಾಡಿದ್ದಾರೆ.