ತಿರುವನಂತಪುರ: ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಸರ್ಕಾರ ಹೆಚ್ಚಿಸಿದೆ. ಹತ್ತು ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನವನ್ನು ರೂ.1000 ಹೆಚ್ಚಿಸಲಾಗಿದೆ. ಇತರರಿಗೆ 500 ಹೆಚ್ಚಿಸಲಾಗುವುದು. 60,232 ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ.
ಪ್ರಸ್ತುತ ಕಾರ್ಮಿಕರಿಗೆ ಮಾಸಿಕ 12 ಸಾವಿರ ರೂ., ಸಹಾಯಕಿಯರಿಗೆ 8 ಸಾವಿರ ರೂ. ವೇತನ ನೀಡಲಾಗುತ್ತಿದೆ. ಪರಿಷ್ಕøತ ವೇತನ ಕಳೆದ ಡಿಸೆಂಬರ್‍ನಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಎರಡೂ ವರ್ಗದ 44,737 ಜನರಿಗೆ 1000 ರೂ.ಹೆಚ್ಚು ವೇತನ ಈ ಮೂಲಕ ಸಿಗಲಿದೆ. 15,495 ಜನರಿಗೆ ರೂ.500 ವೇತನ ಹೆಚ್ಚಳವೂ ದೊರೆಯಲಿದೆ.