ಗೋವಾ: ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಸಹಾಯ ಸಾಧನಗಳನ್ನು ಪೂರೈಸಲು ಜೂನ್ ವೇಳೆಗೆ 100 ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋವಾ: ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಸಹಾಯ ಸಾಧನಗಳನ್ನು ಪೂರೈಸಲು ಜೂನ್ ವೇಳೆಗೆ 100 ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದ ಹತ್ತು ಪ್ರಧಾನ ಮಂತ್ರಿ ದಿವ್ಯಾಶಾ ಕೇಂದ್ರ (ಪಿಎಂಡಿಕೆ)ಗಳು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗೆ ಅಂಥ 45 ಕೇಂದ್ರಗಳನ್ನು ಸ್ಥಾಪಿಸಿವೆ ಎಂದು ಅಂಗವಿಕಲರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ವರದಿಗಾರರಿಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಅಂಥ ಕೇಂದ್ರಗಳನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದ್ದು, ಇದೇ ವರ್ಷದ ಜೂನ್ ವೇಳೆಗೆ ದೇಶದಾದ್ಯಂತ 100 ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.
ಪಿಎಂಡಿಕೆ, ಕೃತಕ ಕಾಲು ಉತ್ಪಾದನಾ ಕಾರ್ಪೊರೇಷನ್‌ನ (ಎಎಲ್‌ಐಎಂಒ) ಒಂದು ಯೋಜನೆಯಾಗಿದೆ. ಸದ್ಯ ಭುವನೇಶ್ವರ, ಬೆಂಗಳೂರು, ಜಬಲ್‌ಪುರ, ಮೊಹಾಲಿ, ಉಜ್ಜೈನ್ ಮತ್ತು ಫರೀದಾಬಾದ್ ನಗರಗಳಲ್ಲಿ ಎಎಲ್‌ಐಎಂಒದ ಸಹಾಯಕ ಉತ್ಪಾದನಾ ಘಟಕಗಳಿವೆ.