HEALTH TIPS

ಆಂಬ್ಯುಲೆನ್ಸ್ ದುರ್ಬಳಕೆ ತಡೆಯಲು ಮೋಟಾರು ವಾಹನ ಇಲಾಖೆಯಿಂದ ಕ್ರಿಯಾತ್ಮಕ ಕ್ರಮ:10 ರಿಂದ ಜಾರಿ

               ತಿರುವನಂತಪುರ: ಆಂಬ್ಯುಲೆನ್ಸ್ ದುರ್ಬಳಕೆ ತಡೆಯಲು ಮೋಟಾರು ವಾಹನ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ‘ಆಪರೇಷನ್ ಸೇಫ್ಟಿ ಟು ಸೇವ್ ಲೈಫ್’ ಯೋಜನೆಯನ್ನು ಇದೇ 10ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ.

             ರಾಜ್ಯದಲ್ಲಿ ಆಂಬ್ಯುಲೆನ್ಸ್ ದುರ್ಬಳಕೆಯಾಗುತ್ತಿರುವ ಬಗ್ಗೆ ಮೊದಲಿನಿಂದಲೂ ವ್ಯಾಪಕ ದೂರುಗಳು ಬಂದಿದ್ದು, ಕೆ.ಬಿ.ಗಣೇಶ್‍ಕುಮಾರ್ ಅವರು ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ರವಾನಿಸಿದರು. ನಿನ್ನೆ ಸಚಿವರ ಸಭೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ.

           ರೋಗಿಗಳನ್ನು ಕರೆದೊಯ್ಯಬೇಕಾದ ಆಂಬ್ಯುಲೆನ್ಸ್‍ಗಳು ಬೇರೆ ಬೇರೆ ಉದ್ದೇಶಗಳಿಗೆ ದುರ್ಬಳಕೆಯಾಗುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆಂಬ್ಯುಲೆನ್ಸ್‍ಗಳಲ್ಲಿ ಸಮರ್ಪಕ ಸೌಲಭ್ಯ ಇಲ್ಲದಿರುವ ಬಗ್ಗೆಯೂ ಮೋಟಾರು ವಾಹನ ಇಲಾಖೆ ಪರಿಶೀಲನೆ ನಡೆಸಲಿದೆ. ಉಲ್ಲಂಘನೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries