ತಿರುವನಂತಪುರಂ: ಎಸ್‍ಎಸ್‍ಎಲ್‍ಸಿ ಮಾದರಿ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಲು ಸರ್ಕಾರ ಸಿದ್ದತೆಯಲ್ಲಿದೆ ಎನ್ನಲಾಗಿದೆ.
ಪ್ರಶ್ನೆ ಪತ್ರಿಕೆ ಮುದ್ರಣಕ್ಕೆ ವಿದ್ಯಾರ್ಥಿಗಳಿಂದ ತಲಾ 10 ರೂಪಾಯಿ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಎಸ್ಸೆಲ್ಸಿ ಮಾದರಿ ಪರೀಕ್ಷೆಗಳು ಫೆಬ್ರವರಿ 19 ರಂದು ಪ್ರಾರಂಭವಾಗುತ್ತವೆ.
ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆ ಮುದ್ರಿಸುತ್ತಿರುವುದು ಇದೇ ಮೊದಲು. ಸರ್ಕಾರದ ಈ ನಿರ್ಧಾರದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಅನಗತ್ಯ ವ್ಯಯಗೈಯ್ಯಲು ಆಲೋಚಿಸದ ಸರ್ಕಾರ ವಿದ್ಯಾರ್ಥಿಗಳ ಪರೀಕ್ಷೆ ಪತ್ರಿಕೆ ಮುದ್ರಿಸಲು ಪಡಿಪಾಟಲುಪಡುತ್ತಿರುವುದು ಅಚ್ಚರಿ ಮೂಡಿಸಿದೆ.