ಪಾಸ್ವರ್ಡ್ ಎಂದಾಕ್ಷಣ ನಮಗೆಲ್ಲಾ ನೆನಪಾಗೋದು ನಮ್ಮ ಮೊಬೈಲ್, ಕಂಪ್ಯೂಟರ್, ಬ್ಯಾಂಕ್ ಲಾಕರ್ ಹೀಗೆ ಮುಂತಾದ ವಸ್ತುಗಳ ಭದ್ರತೆಗೆ ನೀಡಲಾದ ನಾಲ್ಕರಿಂದ ಐದು ಡಿಜಿಟ್ ಅಂಕಿಗಳು. ಈ ಪಾಸ್ವರ್ಡ್ ನಮ್ಮ ದಿನನಿತ್ಯದ ಜೀವನದಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ ಹಾಗೂ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ಬೆಳಗ್ಗೆ ಎದ್ದ ಕೂಡಲೇ ನಮ್ಮ ಫೋನ್ಗೆ ಪಾಸ್ವರ್ಡ್ ಹಾಕಿ ದಿನವನ್ನು ಪ್ರಾರಂಭಿಸುವಂತೆ ಮಾಡಿದೆ.
ಬ್ಯಾಂಕ್ ವಹಿವಾಟು ನಡೆಸಲು ಕೂಡ ಇದೇ ರೀತಿಯ ಸ್ಟ್ರಾಂಗ್ ಪಾಸ್ವರ್ಡ್ ಅನ್ನು ಇಟ್ಟಿರುತ್ತೇವೆ. ಈ ಕೋಡ್ ಡಿಜಿಟ್ಗಳು ನಮನ್ನು ಹೊರತುಪಡಿಸಿದರೆ ಅನ್ಯರಿಗೆ ತಿಳಿದಿರುವುದಿಲ್ಲ. ನಮಗೆ ನಂಬಿಕೆಯಿದ್ದರೆ ನಾವು ನಮ್ಮ ಆಪ್ತರಿಗೆ ಈ ಪಾಸ್ವರ್ಡ್ ಅನ್ನು ಹಂಚಿಕೊಳ್ಳುವ ಮುಖೇನ ಅವರಿಗೂ ತಿಳಿಸಬಹುದು. ಈ ಮೂಲಕ ಕಷ್ಟದ ಸಮಯದಲ್ಲಿ ನಾವು ನಮ್ಮ ಕೋಡ್ ಮರೆತರೆ, ಅವರ ಮೂಲಕ ಇದನ್ನು ಮತ್ತೊಮ್ಮೆ ಪಡೆದುಕೊಳ್ಳಬಹುದು.
ಸದ್ಯ ಈ ರೀತಿಯ ಪಾಸ್ವರ್ಡ್ಗಳನ್ನು ಬಳಸುವ ಅದೆಷ್ಟೋ ಜನರು ವಿಶೇಷವಾಗಿ, ವಿಭಿನ್ನವಾಗಿ ಡಿಜಿಟ್ ಕೋಡ್ಗಳನ್ನು ಇಟ್ಟುಕೊಂಡಿರುತ್ತಾರೆ. ಆ ಪೈಕಿ ಕೆಲವರು ತಮ್ಮ ಹೆಸರಿನ ಕಡೆಯ ಅಕ್ಷರ ಅಥವಾ ಮೊಬೈಲ್ ನಂಬರ್ ಹೀಗೆ ನಾನಾ ಬಗೆಯ ಪಾಸ್ವರ್ಡ್ಗಳನ್ನು ಉಪಯೋಗಿಸುತ್ತಾರೆ. ಆದ್ರೆ, ಇತ್ತೀಚಿಗೆ ಲಭಿಸಿರುವ ಮಾಹಿತಿಯೊಂದರ ಪ್ರಕಾರ, ಜಗತ್ತಿನಲ್ಲಿ ಬಳಸಲಾದ ಟಾಪ್ 10 ಪಾಸ್ವರ್ಡ್ಗಳು ಇವೇ ಎಂಬುದು ಹಲವರಿಗೆ ಆಶ್ವರ್ಯ ಮತ್ತು ಹಾಸ್ಯ ಮೂಡಿಸುವುದಂತು ಖಚಿತ. ಆ ಹತ್ತು ವರ್ಸ್ಟ್ ಪಾಸ್ವರ್ಡ್ಗಳ ಪಟ್ಟಿ ಈ ಕೆಳಕಂಡಂತಿವೆ…
1. password
2. 123456
3. 123456789
4. guest
5. qwerty
6. 12345678
7. 111111
8. 12345
9. col123456
10. 123123