ಮುಂಬೈ: ಆದಿತ್ಯ ಗ್ರೂಪ್‌ನ ಭಾಗವಾಗಿರುವ ಮಲ್ಟಿಬ್ಯಾಗರ್ ಸ್ಟಾಕ್ ಒಂದೇ ದಿನದಲ್ಲಿ ಶೇಕಡಾ 11ರಷ್ಟು ಏರಿಕೆ ಕಂಡಿದೆ.
ಆದಿತ್ಯ ಬಿರ್ಲಾ ಮನಿ ಲಿಮಿಟೆಡ್‌ನ ಷೇರುಗಳ ಬೆಲೆಯು ಶುಕ್ರವಾರ ರೂ. 140.40 ರೂಪಾಯಿಗೆ ತಲುಪಿದೆ. ಇದರ ಹಿಂದಿನ ದಿನದ ಮುಕ್ತಾಯದ ಬೆಲೆಗಿಂತ ಶೇಕಡಾ 11ರಷ್ಟು ಇದು ಹೆಚ್ಚಾಗಿದೆ.
ಈ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು ರೂ. 790 ಕೋಟಿ ಇದು. ಒಂದು ವರ್ಷದಲ್ಲಿ 126 ಪ್ರತಿಶತದಷ್ಟು ಹೆಚ್ಚಳವನ್ನು ಕಾಣುವ ಮೂಲಕ ಇದು ಮಲ್ಟಿಬ್ಯಾಗರ್ ಕ್ಯಾಪ್ ಆಗಿ ಹೊರಹೊಮ್ಮಿದೆ.
ಆದಿತ್ಯ ಬಿರ್ಲಾ ಮನಿ ಲಿಮಿಟೆಡ್ ಕಂಪನಿಯು ಕಳೆದ ಡಿಸೆಂಬರ್ಗೆ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿದೆ.
ತನ್ನ ಕಾರ್ಯಾಚರಣೆಗಳಿಂದ ಇದರ ಆದಾಯವು 76 ಪ್ರತಿಶತದಷ್ಟು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿ ಮೂರನೇ ತ್ರೈಮಾಸಿಕದಲ್ಲಿ 45.81 ಕೋಟಿ ರೂಪಾಯಿಗೆ ತಲುಪಿದೆ.
ಇದರ ನಿವ್ವಳ ಲಾಭವು ಶೇಕಡಾ 73.16ರಷ್ಟು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದ್ದು, ಮೂರನೇ ತ್ರೈಮಾಸಿಕದಲ್ಲಿ 15.14 ಕೋಟಿ ರೂಪಾಯಿಗೆ ತಲುಪಿದೆ.
ಆದಿತ್ಯ ಬಿರ್ಲಾ ಮನಿ ಲಿಮಿಟೆಡ್ ಕಂಪನಿಯು ಇಕ್ವಿಟಿ ಮತ್ತು ಡೆರಿವೇಟಿವ್ ಬ್ರೋಕಿಂಗ್ ಸೇವೆಗಳು ಹಾಗೂ ಪೋರ್ಟ್‌ಫೋಲಿಯೋ ಮ್ಯಾನೇಜ್‌ಮೆಂಟ್ ಸೇವೆಗಳನ್ನು ಒದಗಿಸುತ್ತದೆ. ಇದು ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ.