ಪೆರ್ಲ : ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತಕ್ಕೊಳಪಡಿಸಿ ಮಂಜೇಶ್ವರ ಬ್ಲಾಕ್ ಎಣ್ಮಕಜೆ ಗ್ರಾಮ ಪಂಚಾಯತಿಯ ಮಣಿಯಂಪಾರೆ-ದೇರಡ್ಕ-ಶಿರಿಯ-ಕುರೆಡ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಜ.12ಕ್ಕೆ ಜರಗಲಿದೆ. ಈ ಬಗ್ಗೆ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ಸಭೆ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ಶೇಣಿ ಶ್ರೀಶಾರದಾಂಬ ಎಯುಪಿ ಶಾಲೆಯಲ್ಲಿ ಜರಗಿತು.
ಜನಪ್ರತಿನಿಧಿಗಳಾದ ರಾಧಕೃಷ್ಣ ನಾಯಕ್, ಉಷಾ ಕುಮಾರಿ, ಸೌಧಾಭಿ ಹನೀಫ್, ಪಾಲಾಕ್ಷ ರೈ, ಆಶೀಫ್ ಆಲಿ ಕಂದಲ್ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭ ಕಾರ್ಯಕ್ರಮದ ಯಶಸ್ವಿಗಾಗಿ ರಚಿಸಿದ ಸಮಿತಿಯಲ್ಲಿ ಸೋಮಶೇಖರ್ ಜೆ.ಎಸ್.(ಅಧ್ಯಕ್ಷ),ಸುಬ್ಬಣ್ಣ ಆಳ್ವ (ಪ್ರ.ಸಂಚಾಲಕ), ರಾಧಕೃಷ್ಣ ನಾಯಕ್, ಉಷಾ, ಸೌಧಭಿ (ಉಪಾಧ್ಯಕ್ಷರು), ಪಾಲಾಕ್ಷ ರೈ, ಆಶೀಪ್ ಆಲಿ, ಉμÁ (ಸಹ ಸಂಚಾಲಕರು)ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜ.12 ಕ್ಕೆ ಬೆಳಗ್ಗೆ 9.30 ಕ್ಕೆ ಮಣಿಯಂಪಾರೆಯಲ್ಲಿ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ಎಕೆಎಂ ಆಶ್ರಫ್ ಅವರ ಅಧ್ಯಕ್ಷತೆಯಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಜಿಲ್ಲಾ,ಬ್ಲಾಕ್ ಹಾಗೂ ಪಂ.ಪ್ರತಿನಿಧಿಗಳು ವಿವಿಧ ಇಲಾಖಾ ಪ್ರಮುಖರು ಭಾಗವಹಿಸಲಿರುವರು.