HEALTH TIPS

ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ-130 ಜೆ ವಿಮಾನ

             ವದೆಹಲಿ: ಭಾರತೀಯ ವಾಯುಪಡೆಯ ಸಿ-130 ಜೆ ಸೂಪರ್‌ ಹರ್ಕ್ಯುಲಸ್ ಸಾಗಣೆ ವಿಮಾನವು ಇದೇ ಮೊದಲ ಬಾರಿ ರಾತ್ರಿ ವೇಳೆ ಕಾರ್ಗಿಲ್‌ನ ಗಡಿ ನಿಯಂತ್ರಣ ರೇಖೆ ಬಳಿಯ ಎತ್ತರದ ಪ್ರದೇಶದಲ್ಲಿರುವ ಏರ್‌ಸ್ಟ್ರಿಪ್‌ನಲ್ಲಿ ಇಳಿದಿದೆ.

             ವಾಯುಪಡೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಗರುಡ ಕಮಾಂಡೊಗಳಿದ್ದ ಈ ವಿಮಾನವನ್ನು ಕಾರ್ಗಿಲ್‌ನಲ್ಲಿ ಇಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಅತ್ಯಾಧುನಿಕ ಲ್ಯಾಂಡಿಂಗ್‌ ವ್ಯವಸ್ಥೆಯಲ್ಲಿ (ಎಎಲ್‌ಜಿ) ವಾಯುಪಡೆಯ ಈ ವಿಮಾನವು ಈ ಹಿಂದೆ ಇಳಿದಿದ್ದರೂ ರಾತ್ರಿ ವೇಳೆ ಇಳಿದಿರುವುದು ಇದೇ ಮೊದಲು ಎಂದಿವೆ. ಕಾರ್ಗಿಲ್‌ನ ಏರ್‌ಸ್ಟ್ರಿಪ್‌ ಸುಮಾರು 10,500 ಅಡಿ ಎತ್ತರದಲ್ಲಿದೆ.

                'ಗರುಡ ಕಮಾಂಡೊಗಳ ತರಬೇತಿಯ ಅಂಗವಾಗಿ ಸಿ-130 ಜೆ ವಿಮಾನವು ಈಚೆಗೆ ರಾತ್ರಿ ವೇಳೆ ಭೂಪ್ರದೇಶಕ್ಕೆ ಗೋಚರವಾಗದ ರೀತಿಯಲ್ಲಿ ಕಾರ್ಗಿಲ್‌ನಲ್ಲಿ ಇಳಿದಿದೆ' ಎಂದು ವಾಯುಪಡೆಯು ಎಕ್ಸ್‌ ವೇದಿಕೆಯಲ್ಲಿ ಹೇಳಿದೆ.

                ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಸಮೀಪವಿರುವ ಎಎಲ್‌ಜಿಗಳು ಹಾಗೂ ಏರ್‌ಸ್ಟ್ರಿಪ್‌ಗಳ ಮೂಲಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯವು ಹೆಚ್ಚಿನ ಗಮನ ಹರಿಸಿದೆ ಎಂದು ಮೂಲಗಳು ಹೇಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries