ಮಂಜೇಶ್ವರ: ವರ್ಕಾಡಿ ಕಾವಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅಳವಡಿಸಲಿರುವ ನೂತನ ಧ್ವಜಸ್ತಂಭದ ಭವ್ಯ ಶೋಭಾಯಾತ್ರೆ ಜ. 13ರಂದು ಸಂಜೆ 4ಕ್ಕೆ ಮೊರತ್ತಣೆಯಿಂದ ಕಾವಿ ಸುಬ್ರಹ್ಮನ್ಯ ಸ್ವಾಮಿ ದೇವಸ್ಥಾನದ ವರೆಗೆ ನಡೆಯಲಿದೆ. ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಶ್ರೀದೇವರಿಗೆ ನೂತನಧ್ವಜಸ್ತಂಭ ಸಮರ್ಪಿಸಲಾಗುವುದು.
ಬಾಯಾರು ಪಡ್ಡಾಯಿಮೂಲೆಯಲ್ಲಿ ಬೆಳಗ್ಗೆ 9ರಿಂದ ವೃಕ್ಷಪೂಜೆ, ಕೊಡಲಿ ಮುಹೂರ್ತದೊಂದಿಗೆ ನೂತನ ಧ್ವಜಸ್ತಂಭವನ್ನು ಮೊರತ್ತಣೆ ಜಂಕ್ಷನ್‍ಗೆ ತಲುಪಿಸಿ, ಅಲ್ಲಿಂದ ಸಂಜೆ 4ಕ್ಕೆ ಭವ್ಯ ಮೆರವಣಿಗೆ ಮೂಲಕ ಬೇಕರಿ ಜಂಕ್ಷನ್, ಶ್ರೀದುರ್ಗಾಪರಮೇಶ್ವರೀ ಭಜನಾಮಂದಿರ, ಮಂದ್ರಬೈಲ್ ಶ್ರೀಕೊರಗತನಿಯ ಕ್ಷೇತ್ರ ಹಾದಿಯಾಗಿ ಶ್ರೀಕ್ಷೇತ್ರಕೆಕ ತಲುಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.