ತಿರುವನಂತಪುರಂ: ನವೆಂಬರ್ 24, 2023ರಂದು ಸಂಯುಕ್ತ ಅರಬ್ ಸಂಸ್ಥಾನದ ದುಬೈನಲ್ಲಿ ಆಯೋಜಿಸಲಾಗಿದ್ದ ಹವಾಮಾನ ಸಮ್ಮೇಳನದಲ್ಲಿ ಕೇರಳದ ಮಹಿಳೆಯೊಬ್ಬರು 140 ಭಾಷೆಗಳಲ್ಲಿ ಸಹಿ ಮಾಡುವ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ.
ಸುಚೇತಾ ಸತೀಶ್ ಅವರ ಈ ಮೈಲಿಗಲ್ಲಿನಂಥ ಸಾಧನೆಯನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೊ ತನ್ನ ವೈವಿಧ್ಯತೆ ಹಾಗೂ ಅದ್ಭುತ ಸಂಗೀತದಿಂದಾಗಿ ಕೇಳುಗರ ಮನಸೂರೆಗೊಳ್ಳುತ್ತದೆ ಎಂದು ndtv.com ವರದಿ ಮಾಡಿದೆ.
ಈ ಸಂಗತಿಯನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸುಚೇತಾ ಸತೀಶ್, "ನವೆಂಬರ್ 24, 2023ರಂದು ಆಯೋಜನೆಗೊಂಡಿದ್ದ ಹವಾಮಾನ ಸಮ್ಮೇಳನದಲ್ಲಿ ಒಂಭತ್ತು ಗಂಟೆಯ ಅವಧಿಯಲ್ಲಿ 140 ಭಾಷೆಗಳಲ್ಲಿ ಸಹಿ ಮಾಡುವ ಮೂಲಕ ನಾನು ದೇವರ ಕೃಪೆಯಿಂದ ಗಿನ್ನಿಸ್ ದಾಖಲೆ ನಿರ್ಮಿಸಿದ್ದೇನೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಹಾರೈಕೆಗಳು ಹಾಗೂ ಬೆಂಬಲಕ್ಕೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪುಟದ ಪ್ರಕಾರ, ದುಬೈನ ಭಾರತೀಯ ರಾಯಭಾರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುವ ಸಮ್ಮೇಳನದಲ್ಲಿ ಸುಚೇತಾ ಸತೀಶ್ 140 ಭಾಷೆಗಳಲ್ಲಿ ಸಹಿ ಮಾಡುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. COP 28ನಲ್ಲಿ ಭಾಗವಹಿಸಿದ್ದ 140 ದೇಶಗಳನ್ನು ಪ್ರತಿನಿಧಿಸಲು 140 ಸಂಖ್ಯೆಯನ್ನು ಆಯ್ದುಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.