ಕಾಸರಗೋಡು: ಗಂಭೀರಾವಸ್ಥೆಯಲ್ಲಿದ್ದ ರೋಗಿಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಮತ್ತು ಶಾಲಾ ವಾಹನ ಪರಸ್ಪರ ಡಿಕ್ಕಿಯಾದ ಪರಿಣಾಮ ಹಲವು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಪಘಾತದಿಂದ ಆಂಬುಲೆನ್ಸ್ ಜಖಂಗೊಂಡಿದ್ದು, ತಕ್ಷಣ ಬೇರೊಂದು ವಾಹನದಲ್ಲಿ ರೋಗಿಯನ್ನು ಕೊಂಡೊಯ್ದರೂ, ಉಪ್ಪಳ ತಲುಪುವಾಗ ಅದರಲ್ಲಿದ್ದ ರೋಗಿ ಮೃತಪಟ್ಟಿದ್ದರು.
ಬಂದ್ಯೋಡು ಮುಟ್ಟಂನ ಖಾಸಗಿ ಶಾಲೆ ವಾಹನದಲ್ಲಿದ್ದ 14ರಷ್ಟು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ನ್ಯುಮೋನಿಯಾ ಬಾಧಿಸಿದ್ದ ಸುರೇಶ್‍ಕುಮಾರ್ ಎಂಬವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ಆಂಬುಲೆನ್ಸ್‍ನಲ್ಲಿ ಸಾಗಿಸುತ್ತಿದ್ದಾಗ ಶಿರಿಯಾದಲ್ಲಿ ಅಪಘಾತ ಸಂಬವಿಸಿದೆ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.