ತಿರುವನಂತಪುರ: ರಾಜ್ಯದ ಸಣ್ಣ ವ್ಯಾಪಾರಿಗಳು ಮುಂದಿನ ತಿಂಗಳು 15ರಂದು ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕೇರಳ ವ್ಯಾಪಾರ ವ್ಯವಸಾಯಿ ಏಕೋಪನ ಸಮಿತಿ ತಿಳಿಸಿದೆ.
ತ್ಯಾಜ್ಯ ನಿರ್ವಹಣೆ, ಸಣ್ಣ ವ್ಯಾಪಾರಸ್ಥರ ವ್ಯಾಟ್ ನೋಟೀಸ್ ಮುಂತಾದ ನಾನಾ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನೆ ತೀವ್ರಗೊಳಿಸಲಾಗುತ್ತಿದೆ ಎಂದು ಸಮಿತಿ ಮಾಹಿತಿ ನೀಡಿದೆ.
ಇದೇ ವೇಳೆ ಇದೇ 29ರಂದು ಕಾಸರಗೋಡಿನಿಂದ ವ್ಯಾಪಾರ ರಕ್ಷಣಾ ಯಾತ್ರೆ ಆರಂಭವಾಗಲಿದೆ. ಫೆಬ್ರವರಿ 15 ರಂದು ತಿರುವನಂತಪುರಂ ತಲುಪಲಿದೆ. ಇಲ್ಲಿ ಐದು ಲಕ್ಷ ವ್ಯಾಪಾರಿಗಳ ಸಹಿ ಸಂಗ್ರಹಿಸಲಾಗುವುದು. ತ್ಯಾಜ್ಯ ನಿರ್ವಹಣೆ ಮತ್ತು ವ್ಯಾಟ್ ನೋಟೀಸ್‍ನಂತಹ ವಿಷಯಗಳಲ್ಲಿ ವ್ಯಾಪಾರಿಗಳು ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿಸುವುದು ಇದರ ಉದ್ದೇಶವಾಗಿದೆ.