ಸುಲ್ತಾನ್‌ಪುರ : ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯ ಇದೇ 18ಕ್ಕೆ ಮುಂದೂಡಿತು.
ನ್ಯಾಯಾಲಯದಲ್ಲಿ ವಕೀಲರಿಗಾಗಿ ನಡೆದಿರುವ ನ್ಯಾಯಾಂಗದ ಕಾರ್ಯಾಗಾರದಲ್ಲಿ ವಕೀಲರು ಶನಿವಾರ ಪಾಲ್ಗೊಂಡಿದ್ದರಿಂದ, ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದರು.
ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ರಾಹುಲ್ ವಿರುದ್ಧ 2018ರ ಆ.4ರಂದು ಈ ಕುರಿತು ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ನ. 18ರಂದು ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರಾದ ಯೋಗೇಶ್ ಯಾದವ್ ತೀರ್ಪನ್ನು ಕಾಯ್ದಿರಿಸಿದ್ದರು. ನ. 27ರಂದು ಮುಂದಿನ ವಿಚಾರಣೆಗೆ ಈ ವಿಷಯವನ್ನು ಪ್ರಕಟಿಸಿದ್ದರು. ಡಿ. 16ರಂದು ಹಾಜರಾಗುವಂತೆ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ್ದರು. ಆದರೆ ಅವರು ಹಾಜರಾಗಿರಲಿಲ್ಲ. ನಂತರ ಜ. 6ರಂದು ಹಾಜರಾಗುವಂತೆ ಸೂಚಿಸಿದ್ದರು ಎಂದು ಅವರು ತಿಳಿಸಿದ್ದರು.