ಪತ್ತನಂತಿಟ್ಟ: ಮಕರಜ್ಯೋತಿ ದರ್ಶನದ ನಂತರ ಅಯ್ಯಪ್ಪ ಭಕ್ತರು ಶಬರಿಮಲೆ ಬೆಟ್ಟ ಇಳಿಯತೊಡಗಿದ್ದಾರೆ. ಪವಿತ್ರ ಆಭರಣ(ತಿರುವಾಭರಣ) ವಿಭೂಷಿತ ದೇವರ ದರ್ಶನಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು.
ಜನವರಿ 18ರವರೆಗೆ ಪವಿತ್ರ ಆಭರಣ ಧರಿಸಿದ ಅಯ್ಯಪಪ್ ಸ್ವಾಮಿಯ ದರ್ಶನಕ್ಕೆ ಅವಕಾಶವಿದೆ.
ಮಕರÀಜ್ಯೋತಿ ದರ್ಶನದ ನಂತರವೂ ಸನ್ನಿಧಿ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ಆಂಧ್ರ, ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಕರ ಬೆಳಕು ದರ್ಶನದ ನಂತರ ಆರಂಭವಾದ ವಾಪಸಾತಿ ಮುಂದುವರಿದಿದೆ.
ಭಕ್ತರು ಬೆಟ್ಟ ಇಳಿಯಲು ಹಲವಾರು ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕರವಿಳಕ್ ದರ್ಶನದ ನಂತರ ಪಂಪಾದಿಂದ ಸನ್ನಿಧಾನಂ ವರೆಗೆ ಪ್ರಯಾಣಕ್ಕೆ ಮತ್ತೆ ಅವಕಾಶ ಕಲ್ಪಿಸಲಾಯಿತು.