ತಿರುಪತಿ: ಗಣರಾಜ್ಯೋತ್ಸವ ಸೇರಿ ಸತತ ರಜೆಗಳ ಹಿನ್ನೆಲೆಯಲ್ಲಿ ತಿರುಪತಿಗೆ ಬಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು. ನೂಕುನುಗ್ಗಲು ಮುಂದುವರಿದಿದೆ. ವೈಕುಂಠ ಕ್ಯೂ ಕಾಂಪ್ಲೆಕ್ಸ್ ಭಕ್ತರಿಂದ ತುಂಬಿ ತುಳುಕುತ್ತಿದ್ದು, 18 ಗಂಟೆ ನಂತರ ವೆಂಕಟೇಶ್ವರ ಸ್ವಾಮಿಯ ದರ್ಶನವಾಗುತ್ತಿದೆ.
ಶುಕ್ರವಾರ (ಜ.26) 71,664 ಭಕ್ತರು ತಿರುಮಲೆಯಲ್ಲಿ ದೇವರ ದರ್ಶನ ಪಡೆದಿದ್ದಾರೆ. 33,330 ಭಕ್ತರು ಮುಡಿ ಸಮರ್ಪಿಸಿದ್ದಾರೆ. ದೇವಸ್ಥಾನದಲ್ಲಿ ಹುಂಡಿಯಲ್ಲಿ 3.37 ಕೋಟಿ ರೂಪಾಯಿ ಕಾಣಿಕೆಯ ರೂಪವಾಗಿ ಬಂದಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಟೈಮ್ ಸ್ಲಾಟ್ ಟಿಕೆಟ್ ಪಡೆಯದ ಭಕ್ತರು ತಿಮ್ಮಪ್ಪನ ದರ್ಶನ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಶುಕ್ರವಾರದಿಂದ ಭಾನುವಾರದವರೆಗೆ ಸತತ ರಜೆ ಇರುವುದರಿಂದ ತಿರುಮಲದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಿರುಪತಿಯಗೋವಿಂದರಾಜಸ್ವಾಮಿಯ ತೆಪ್ಪೋತ್ಸವ ಫೆ.17 ರಿಂದ ಆರಂಭವಾಗಿ ಫೆ.23 ರವರೆಗೆ ಒಟ್ಟು 7 ದಿನಗಳ ಕಾಲ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6 ರಿಂದ ರಾತ್ರಿ 8 ರವರೆಗೆ ಸ್ವಾಮಿ ತೆಪ್ಪದಲ್ಲಿ ದೇವತೆಗಳ ಸಮೇತ ಕುಳಿತು ಭಕ್ತರಿಗೆ ದರ್ಶನ ನೀಡಲಿದ್ದಾರೆ. ನಂತರ ದೇವಸ್ಥಾನದ ನಾಲ್ಕು ಬೀದಿಗಳಲ್ಲಿ ಭಕ್ತಾದಿಗಳಿಗೆ ರಥೋತ್ಸವ ಮೂಲಕ ಆರ್ಶೀರ್ವಚನ ನೀಡಲಾಗುತ್ತದೆ.