ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ವಿವೇಕಾನಂದ ಜಯಂತಿ, ಶಾಲಾ ವಾರ್ಷಿಕೋತ್ಸವ ಮತ್ತು ಹೆತ್ತವರ ದಿನಾಚರಣೆ ಕಾರ್ಯಕ್ರಮಗಳು ನಾಲೆ(ಜ.18ರಂದು) ಬೆಳಗ್ಗೆ 10ರಿಂದ ನಡೆಯಲಿದೆ.
ಶಾಲಾ ವ್ಯವಸ್ಥಾಪಕ ಹೃಷೀಕೇಶ ವಿ.ಯಸ್. ಬೆಳಗ್ಗೆ 10ಕ್ಕೆ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ಬಳಿಕ ಸ್ವರ್ಗ, ಕೆಂಗಣಾಜೆ, ಅಡ್ಕಸ್ಥಳ, ಶಿವಗಿರಿ ಅಂಗನವಾಡಿ, ಪೆರ್ಲ ವಿವೇಕ ಶಿಶುಮಂದಿರದ ಮಕ್ಕಳು ಹಾಗೂ ಸ್ವರ್ಗ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಮಧ್ಯಾಹ್ನ 12.30ರಿಂದ ಭೋಜನ ವಿತರಣೆ ನಡೆಯಲಿದೆ.
ಮಧ್ಯಾಹ್ನ 2ರಿಂದ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಪಿ.ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕುಂಬಳೆ ಉಪಜಿಲ್ಲೆ ಸಹಾಯಕ ವಿದ್ಯಾಧಿಕಾರಿ ಶಶಿಧರ ಎಂ., ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮಂಗಳೂರಿನ ಉದ್ಯಮಿ ವೆಂಕಟೇಶ ಪಿ.ಎಸ್.ಅವರಿಂದ ಸ್ವಸ್ತಿ ವಾಚನ, ಆಯುರ್ವೇದ ಪಂಚಕರ್ಮ ವಿಭಾಗದಲ್ಲಿ ಪ್ರಥಮ ರಾಂಕ್ ನೊಂದಿಗೆ ಚಿನ್ನದ ಪದಕ ವಿಜೇತೆ ಡಾ.ರಮ್ಯಶ್ರೀ ಡಿ., ಎಂಬಿಎ ಯಲ್ಲಿ ಚಿನ್ನದ ಪದಕ ವಿಜೇತೆ ನಿಶಾ ಬದಿ ಅವರಿಗೆ ಅಭಿನಂದನೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ವಾರ್ಡ್ ಸದಸ್ಯ ರಾಮಚಂದ್ರ ಎಂ. ಶುಭ ಹಾರೈಸುವರು. ಹೃಷಿಕೇಶ ವಿ.ಎಸ್. ಮತ್ತು ಶಾಲಾ ಮಾತೃಸಂಗಮ ಅಧ್ಯಕ್ಷೆ ದಿವ್ಯಾ ಶಿರಂತಡ್ಕ ಉಪಸ್ಥಿತರಿರುವರು. ಸಂಜೆ 4:30ರಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.