HEALTH TIPS

1990ರ ಕಸ್ಟಡಿ ಹಿಂಸೆ ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಗುಜರಾತ್ ಹೈಕೋರ್ಟ್

                  ಹಮದಾಬಾದ್ : 1990ರ ಕಸ್ಟಡಿ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿ ಜಾಮ್ನಗರ್ ಸೆಷನ್ಸ್ ನ್ಯಾಯಾಲಯ 2019ರಲ್ಲಿ ತನ್ನನ್ನು ಹತ್ಯೆ ದೋಷಿ ಎಂದು ಪರಿಗಣಿಸಿರುವುದನ್ನು ಹಾಗೂ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಿದ ಮೇಲ್ಮನವಿಯನ್ನು ಗುಜರಾತ್ ಉಚ್ಛ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

                ಸಂಜೀವ್ ಭಟ್ ಅವರು ಜಾಮ್ನಗರದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ ಅಧಿಕಾರದಲ್ಲಿದ್ದ ಸಂದರ್ಭ ನಡೆದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಮಾಜಿ ಪೊಲೀಸ್ ಕಾನ್ಸ್ ಟೇಬಲ್ ಪ್ರವೀಣ್ ಸಿಂಗ್ ಝಾಲಾ ಕೂಡ ದೋಷಿ ಎಂದು ಪರಿಗಣಿತರಾಗಿದ್ದಾರೆ. ಅವರಿಗೆ ಕೂಡ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ತಮ್ಮನ್ನು ಹತ್ಯಾ ದೋಷಿಗಳು ಎಂದು ಪರಿಗಣಿಸಿ ಜಾಮ್ನಗರ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಇಬ್ಬರೂ ಮೇಲ್ಮನವಿ ಸಲ್ಲಿಸಿದ್ದಾರೆ.

                ಐಪಿಸಿ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಸಂಬಂಧಿಸಿದ ಆರೋಪಿ ವ್ಯಕ್ತಿಗಳನ್ನು ದೋಷಿ ಎಂದು ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯ ದಾಖಲಿಸಿದ ಕಾರಣಗಳನ್ನು ನಾವು ಪರಿಶೀಲನೆ ನಡೆಸಿದ್ದೇವೆ ಎಂದು ನ್ಯಾಯಮೂರ್ತಿ ಎ.ಜೆ. ಶಾಸ್ತ್ರಿ ಹಾಗೂ ಸಂದೀಪ್ ಭಟ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಂಗಳವಾರ ಹೇಳಿದೆ. ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿದ ಎಲ್ಲಾ ಸಾಕ್ಷ್ಯಗಳನ್ನು ನಾವು ಪರಿಶೀಲಿಸಿದ್ದು, ಅದು ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂಬುದು ನಮ್ಮ ಅಭಿಪ್ರಾಯ ಎಂದು ಅದು ತಿಳಿಸಿದೆ.

                1990 ಅಕ್ಟೋಬರ್ 30ರಂದು ಬಿಜೆಪಿ ಹಾಗೂ ವಿಎಚ್ಪಿ ಭಾರತ್ ಬಂದ್ಗೆ ಕರೆ ನೀಡಿದ ಬಳಿಕ ಜಾಮ್ನಗರ್ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಸಂಜಯ್ ಭಟ್ ಅವರು ನೂರಕ್ಕಿಂತ ಅಧಿಕ ಜನರನ್ನು ವಶಕ್ಕೆ ತೆಗೆದುಕೊಂಡಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ಬಂಧಿತರಲ್ಲಿ ಓರ್ವರಾದ ಪ್ರಭುದಾಸ್ ವೈಷ್ಣಾನಿ ಅವರು ಬಿಡುಗಡೆಯ ಬಳಿಕ ಮೂತ್ರ ಪಿಂಡದ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಸಂಜಯ್ ಭಟ್ ಹಾಗೂ ಅವರ ಸಹೋದ್ಯೋಗಿಗಳು ಕಸ್ಟಡಿಯಲ್ಲಿ ನೀಡಿದ ಹಿಂಸೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈಷ್ಣಾನಿ ಅವರ ಕುಟುಂಬ ಆರೋಪಿಸಿತ್ತು. ಬಂಧಿತರಿಗೆ ನೀರು ಕುಡಿಯದಂತೆ ಪೊಲೀಸರು ತಡೆದಿದ್ದು, ವೈಷ್ಣಾನಿ ಅವರ ಕಿಡ್ನಿಗೆ ಹಾನಿ ಉಂಟಾಗಲು ಕಾರಣವಾಯಿತು ಎಂದು ಅವರು ಅದು ಪ್ರತಿಪಾದಿದ್ದಾರೆ.

               ಗುಜರಾತ್ ನ ಸೋಮನಾಥದಿಂದ ಉತ್ತರಪ್ರದೇಶದ ಅಯೋಧ್ಯೆವರೆಗೆ ರಥ ಯಾತ್ರೆಯ ನೇತೃತ್ವ ವಹಿಸಿದ್ದ ಬಿಜೆಪಿಯ ರಾಷ್ಟ್ರಾಧ್ಯಕ್ಷ ಎಲ್.ಕೆ. ಅಡ್ವಾಣಿ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಬಂದ್ ಗೆ ಕರೆ ನೀಡಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries