ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ವಾರ್ಷಿಕೋತ್ಸವವು ಜನವರಿ 19 ಶುಕ್ರವಾರದಂದು ಕ್ಷೇತ್ರ ತಂತ್ರಿವರ್ಯರಾದ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಸರಳವಾಗಿ ಜರಗಲಿರುವುದು. ಅದೇ ದಿನ ಬೆಳಗ್ಗೆ 10.30ಕ್ಕೆ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಆರ್ಥಿಕತೆಯನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀನಿಧಿ ನಾಮಾಂಕಿತ ಕೂಪನನ್ನು ಸಮಿತಿಯ ಗೌರವ ಅಧ್ಯಕ್ಷ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರು ಬಿಡುಗಡೆಗೊಳಿಸಲಿರುವರು. ಸಮಿತಿಯ ಗೌರವ ಸಲಹೆಗಾರರಾದ ಉದ್ಯಮಿ ಬಿ ವಸಂತ ಪೈ ಅಧ್ಯಕ್ಷತೆ ವಹಿಸುವರು. ಜೀರ್ಣೋದ್ಧಾರ ಸಮಿತಿಯ ರಕ್ಷಣಾಧಿಕಾರಿ ಉದ್ಯಮಿ ಮಧುಸೂದನ ಆಯರ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿರುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮುಕೇಶ್, ಸಾಹಿತಿ ರಾಜಶ್ರೀ ಟಿ ರೈ ಪೆರ್ಲ, ಗಣೇಶ್ ಉಳ್ಳೋಡಿ, ಶ್ಯಾಮ ಭಟ್ ಏವುಂಜೆ, ಸಂತೋಷ್ ಕುಮಾರ್ ಎಸ್ ಮಾನ್ಯ ವೇದಿಕೆಯಲ್ಲಿ ಉಪಸ್ಥಿತರಿರುವರು.