HEALTH TIPS

ರಸ್ತೆ ಅಪಘಾತ: ದೇಶದಲ್ಲಿ ಗಂಟೆಗೆ 19 ಸಾವು- ಸಚಿವ ನಿತಿನ್‌ ಗಡ್ಕರಿ

                 ವದೆಹಲಿ: 'ದೇಶದಲ್ಲಿ ರಸ್ತೆ ಅಪಘಾತ ಮತ್ತು ಜನರ ಸಾವಿನ ಪ್ರಕರಣಗಳನ್ನು 2030ರೊಳಗೆ ಶೇ 50ರಷ್ಟಕ್ಕೆ ತಗ್ಗಿಸುವುದು ಕೇಂದ್ರ ಸರ್ಕಾರದ ಪ್ರಧಾನ ಆದ್ಯತೆಯಾಗಿದೆ' ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

              ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ದೇಶದಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 19 ಮಂದಿ ಮೃತಪಡುತ್ತಿದ್ದಾರೆ' ಎಂದು ತಿಳಿಸಿದರು.

                 ರಸ್ತೆ ಸುರಕ್ಷತಾ ಪಾಲನೆಯಲ್ಲಿ ರಸ್ತೆ ಮತ್ತು ವಾಹನಗಳು, ಸಂಚಾರ ನಿಯಮದ ಅನುಷ್ಠಾನ, ಚಾಲಕರಿಗೆ ಶಿಕ್ಷಣ ಹಾಗೂ ತುರ್ತು ವೈದ್ಯಕೀಯ ಸೇವೆಯ ಪಾತ್ರ ಹಿರಿದು. ಇವುಗಳ ಬಲವರ್ಧನೆಗೆ ಕ್ರಮವಹಿಸಲಾಗುವುದು ಎಂದರು.

               ಸಾರಿಗೆ ಸಚಿವಾಲಯದ ಅಂಕಿಅಂಶದ ಪ್ರಕಾರ 2022ರಲ್ಲಿ ದೇಶದಲ್ಲಿ 4.6 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು, 1.68 ಲಕ್ಷ ಮಂದಿ ಮೃತಪಟ್ಟಿದ್ದಾರೆ. 4 ಲಕ್ಷ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದರು.

               ಅಲ್ಲದೇ, ಆ ವರ್ಷದಲ್ಲಿ ಅಪಘಾತಗಳ ಸಂಖ್ಯೆ ಶೇ 12ರಷ್ಟು ಹಾಗೂ ಸಾವಿನ ಪ್ರಕರಣಗಳು ಶೇ 10ರಷ್ಟು ಏರಿಕೆಯಾಗಿವೆ. ಮೃತಪಟ್ಟವರಲ್ಲಿ ಶೇ 60ರಷ್ಟು 18ರಿಂದ 35 ವಯೋಮಾನದವರು ಇದ್ದಾರೆ. ಇದರಿಂದ ದೇಶದ ಜಿಡಿಪಿಗೆ ಶೇ 3.14ರಷ್ಟು ನಷ್ಟವಾಗಿದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries