ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ನೂತನ ರಾಜಗೋಪುರಕ್ಕೆ ಫೆ. 1 ರಂದು ಗುರುವಾರ ಬೆಳಗ್ಗೆ 9.45ರ ಶುಭ ಮುಹೂರ್ತದಲ್ಲಿ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಉಪಸ್ಥಿತಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎಡನೀರು ಮಠಾಧೀಸ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳವರು ಶಿಲಾನ್ಯಾಸಗೈಯ್ಯುವರು.
ಬಳಿಕ ಜರಗುವ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಲಿರುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸತ್ಯನಾರಾಯಣ ಬೆಳೇರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ, ಕಹಳೆ ನ್ಯೂಸ್ ಪ್ರಧಾನ ಸಂಪಾದಕ ಶಾಮ್ ಸುದರ್ಶನ ಹೊಸಮೂಲೆ, ಕೆನರಾ ಬ್ಯಾಂಕ್ ಪ್ರಬಂಧಕ ರಾಹುಲ್ ಅಶೋಕ್, ಅಖಿಲೇಶ್ ನಗುಮುಗಮ್, ನರೇಂದ್ರ ಬಿ ಎನ್, ವೆಂಕಟಗಿರೀಶ್ ಪಟ್ಟಾಜೆ ಮೊದಲಾದವರು ಉಪಸ್ಥಿತರಿರುವರು.