ಮುಂಬೈ: ದೇಶದಲ್ಲಿ ಇದುವರೆಗೆ ಕೋವಿಡ್ ವೈರಾಣುವಿನ ಹೊಸ ಉಪ ತಳಿ ಜೆಎನ್.1ನ ಸೋಂಕು 1,013 ಜನರಿಗೆ ತಗಲಿರುವುದು ದೃಢಪಟ್ಟಿದೆ ಎಂದು ಭಾರತೀಯ ಕೋವಿಡ್ ವೈರಾಣು ಸಂರಚನಾ ವಿಶ್ಲೇಷಣಾ ಘಟಕ (ಐಎನ್‌ಎಸ್‌ಎಸಿಒಜಿ) ತಿಳಿಸಿದೆ.
ಮುಂಬೈ: ದೇಶದಲ್ಲಿ ಇದುವರೆಗೆ ಕೋವಿಡ್ ವೈರಾಣುವಿನ ಹೊಸ ಉಪ ತಳಿ ಜೆಎನ್.1ನ ಸೋಂಕು 1,013 ಜನರಿಗೆ ತಗಲಿರುವುದು ದೃಢಪಟ್ಟಿದೆ ಎಂದು ಭಾರತೀಯ ಕೋವಿಡ್ ವೈರಾಣು ಸಂರಚನಾ ವಿಶ್ಲೇಷಣಾ ಘಟಕ (ಐಎನ್‌ಎಸ್‌ಎಸಿಒಜಿ) ತಿಳಿಸಿದೆ.
ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು (214) ಜೆಎನ್.1 ಪ್ರಕರಣಗಳು ವರದಿಯಾಗಿವೆ ಎಂದು ಐಎನ್‌ಎಸ್‌ಎಸಿಒಜಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ 170, ಕೇರಳದಲ್ಲಿ 154, ಆಂಧ್ರಪ್ರದೇಶದಲ್ಲಿ 189, ಗುಜರಾತ್‌ನಲ್ಲಿ 76 ಮತ್ತು ಗೋವಾದಲ್ಲಿ 66 ಜೆಎನ್.1 ಪ್ರಕರಣಗಳು ವರದಿಯಾಗಿವೆ.
ಇನ್ನುಳಿದಂತೆ ತೆಲಂಗಾಣ ಹಾಗೂ ರಾಜಸ್ಥಾನದಲ್ಲಿ ತಲಾ 32, ಛತ್ತೀಸಗಢದಲ್ಲಿ 25, ತಮಿಳುನಾಡಿನಲ್ಲಿ 22, ದೆಹಲಿಯಲ್ಲಿ 16, ಉತ್ತರ ಪ್ರದೇಶದಲ್ಲಿ 6, ಹರಿಯಾಣದಲ್ಲಿ ಐದು, ಒಡಿಶಾದಲ್ಲಿ ಮೂರು, ಪಶ್ಚಿಮ ಬಂಗಾಳದಲ್ಲಿ ಎರಡು ಮತ್ತು ಉತ್ತರಾಖಂಡದಲ್ಲಿ ಒಂದು ಪ್ರಕರಣ ದೃಢಪಟ್ಟಿವೆ.
ಈವರೆಗೆ ಒಟ್ಟು 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜೆಎನ್.1 ಪ್ರಕರಣಗಳು ವರದಿಯಾಗಿವೆ ಎಂದು ಐಎನ್‌ಎಸ್‌ಎಸಿಒಜಿ ತಿಳಿಸಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.