ನವದೆಹಲಿ: 2023-24ರಲ್ಲಿ ಭಾರತದ ಆರ್ಥಿಕತೆಯು ಶೇ. 7.3 ರಷ್ಟು ಪ್ರಗತಿಯಾಗಲಿದೆ ಎಂದು ರಾಷ್ಟ್ರೀಯ ಅಂಕಿಸಂಖ್ಯೆ ಕಚೇರಿ (ಎನ್ ಎಸ್ ಒ) ಶುಕ್ರವಾರ ಊಹಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 7.2 ರಷ್ಟಿತ್ತು.
2023-24 ರ ರಾಷ್ಟ್ರೀಯ ಆದಾಯದ ಮೊದಲ ಅಂದಾಜು ಬಿಡುಗಡೆ ಮಾಡಿರುವ ಎನ್ ಎಸ್ ಒ, 2023-24ರಲ್ಲಿ ನೈಜ ಜಿಡಿಪಿ ಅಥವಾ ಜಿಡಿಪಿ 171.79 ಲಕ್ಷ ಕೋಟಿ ರೂ. ಮಟ್ಟವನ್ನು ತಲುಪಲಿದೆ ಎಂದು ಅಂದಾಜಿಸಿದೆ. 2022-23ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಅಂದಾಜು ರೂ. 160.06 ಲಕ್ಷ ಕೋಟಿಯಷ್ಟಾಗಿತ್ತು.
2023-24ರಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ. 7.3 ರಷ್ಟು ಪ್ರಗತಿಯಾಗಿದೆ ಎಂದು ಅಂದಾಜಿಸಲಾಗಿದೆ. 2023-24 ರ ಪ್ರಸ್ತುತ ಬೆಲೆಗಳಲ್ಲಿ ಜೆಡಿಪಿ 296.58 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಜೆಡಿಪಿ ರೂ.272.41 ಲಕ್ಷ ಕೋಟಿ ಎಂದು ಅಂದಾಜಿಲಾಗಿತ್ತು.
ಡಿಸೆಂಬರ್ 2023 ರಲ್ಲಿ, ಆರ್ ಬಿಐ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 6-5 ರಿಂದ ಶೇ.7ಕ್ಕೆ ಏರಿಕೆಯಾಗಲಿದೆ ಎಂದು ಊಹಿಸಿತ್ತು.