ಕಾಸರಗೋಡು: ಕೇರಳ ರಾಜ್ಯ ಅಬಕಾರಿ ಇಲಾಖೆ, ಬೇಡಡ್ಕ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ವಿಮುಕ್ತಿಮಿಷನ್, ಜಿಲ್ಲಾಡಳಿತದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕ್ರಿಸ್ ಮಸ್ ರಜೆಯಲ್ಲಿ ಬೇಡಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ 17 ವಾರ್ಡುಗಳ 18 ವರ್ಷದೊಳಗಿನ ಮಕ್ಕಳಿಗಾಗಿ ಸಿದ್ದಪಡಿಸಿದ ಸೃಜನಾತ್ಮಕ ಚಟುವಟಿಕೆಗಳ ಪಂಚಾಯತ್ ಮಟ್ಟದ ಪ್ರದರ್ಶನ ಉದ್ಘಾಟನೆ ಮತ್ತು ಸಮಾರೋಪ ಸಭೆಯನ್ನು ಸಹ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಉದ್ಘಾಟಿಸಿದರು.
ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಅಧ್ಯಕ್ಷತೆ ವಹಿಸಿದ್ದರು. ಉಪ ಅಬಕಾರಿ ಆಯುಕ್ತ ಪಿ.ಕೆ.ಜಯರಾಜ್ ದ್ವೈವಾರ್ಷಿಕ ವರದಿ ನೀಡಿದರು.
ನವಮಾಧ್ಯಮಗಳ ಪ್ರಭಾವ ಮಕ್ಕಳ ಸೃಜನಶೀಲತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಸೃಜನಶೀಲ ಸಾಮಥ್ರ್ಯಗಳನ್ನು ಪತ್ತೆ ಹಚ್ಚಿ ಅವರನ್ನು ಪೆÇ್ರೀತ್ಸಾಹಿಸಿ ಮಾರಣಾಂತಿಕ ನಶೆಗೆ ದೂಡದೆ ಅವರನ್ನು ಸರಿದಾರಿಯಲ್ಲಿ ಮುನ್ನಡೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ವಿನಾಲೆ ಅಂಗವಾಗಿ ಒಂದು ದಿನದ ತರಬೇತಿ ನಡೆಯಿತು.
17 ವಾರ್ಡ್‍ಗಳಲ್ಲಿ ತಲಾ 16 ಮಕ್ಕಳಿಗೆ ಹುಲ್ಲು, ಬಿದಿರು, ಗೆರಟೆ, ಎಲೆ, ಮಣ್ಣು, ಕಾಗದ, ತ್ಯಾಜ್ಯ ವಸ್ತು, ಪ್ಲಾಸ್ಟಿಕ್, ಚಿತ್ರ, ಕೊಲಾಜ್, ಸ್ಕಿಟ್ ಮತ್ತು ನಟನೆಯಲ್ಲಿ ತರಬೇತಿ ನೀಡಲಾಯಿತು.
ಮಕ್ಕಳ ನೇತೃತ್ವದಲ್ಲಿ ವಾರ್ಡ್ ಗಳಲ್ಲಿ ಇತರೆ ಮಕ್ಕಳ ಸೃಜನಶೀಲ ಚಟುವಟಿಕೆ ನಡೆಸಿ 28ರಂದು ವಾರ್ಡ್ ಮಟ್ಟದ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಕ್ರಿಸ್ಮಸ್ ರಜೆಯ ಹತ್ತು ದಿನಗಳಲ್ಲಿ ಇಡೀ ಗ್ರಾಮ ಪಂಚಾಯತಿಯೇ ಮಕ್ಕಳ ಜೊತೆಗೂಡಿ ಅವರ ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸಿತ್ತು. ಗ್ರಾ.ಪಂ.ಸದಸ್ಯರು, ಕುಟುಂಬಶ್ರೀ ಸಿಡಿಎಸ್, ಸಾರ್ವಜನಿಕ ಕಾರ್ಯಕರ್ತರು ಮುಂತಾದವರ ಸೃಜನಾತ್ಮಕ ಸಂವಾದದಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜನಪದ ಗೀತೆ ಕಲಾವಿದರಾದ ಉದಯನ್ ಕುಂಡಂಕುಳಿ, ಎಚ್.ಶಂಕರನ್, ಲೋಹಿತಾಕ್ಷನ್, ಗೋಪಾಲಕೃಷ್ಣನ್ ಕೊಳತ್ತೂರು ಮತ್ತಿತರರು ತರಬೇತಿಯ ನೇತೃತ್ವ ವಹಿಸಿದ್ದರು.
ಪಂಚಾಯಿತಿ ಉಪಾಧ್ಯಕ್ಷ ಎ.ಮಾಧವನ್, ಜಿಲ್ಲಾ ಯೋಜನಾ ಸಮಿತಿ ಸದಸ್ಯ ಸಿ.ರಾಮಚಂದ್ರನ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವರದ ರಾಜ್, ಮಾಧವನ್ ಬೇಡಿರ, ಜಾಯ್ ಜೋಸೆಫ್, ಕೆ.ಎಂ.ಸ್ನೇಹಾ ಮಾತನಾಡಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ಹಾಗೂ ಅಬಕಾರಿ ತಡೆ ಅಧಿಕಾರಿ ಎನ್.ಜಿ.ರಘುನಾಥನ್ ಸ್ವಾಗತಿಸಿ, ಬೇಡಡ್ಕ ಗ್ರಾಮ ಪಂಚಾಯಿತಿ ಸಿಡಿಎಸ್ ಅಧ್ಯಕ್ಷೆ ಎಂ.ಗುಲಾಬಿ ವಂದಿಸಿದರು.