ಹೊಸ ವರ್ಷದ ಮೊದಲ ತಿಂಗಳಿನಲ್ಲಿ ನೀವು ಬ್ಯಾಂಕ್ ವ್ಯವಹಾರ ಮಾಡುವುದಾದರೆ ಜನವರಿಯಲ್ಲಿ ಈ 15 ದಿನ ಬ್ಯಾಂಕ್ ಮುಚ್ಚಿರುತ್ತೆ
ಜನವರಿ 1: ಹೊಸ ವರ್ಷ
ಜನವರಿ 7: ಭಾನುವಾರ
ಜನವರಿ 11: ಮಿಷನರಿ ದಿನ (ಮಿಝೋರಾಂ)
ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ(ಪಶ್ಚಿಮ ಬಂಗಾಳ)
ಜನವರಿ 1 4: ಭಾನುವಾರ
ಜನವರಿ 15: ಸಂಕ್ರಾಂತಿ
ಜನವರಿ 16: ತುಸು ಪೂಜೆ ( ಪಶ್ಚಿಮ ಬಂಗಾಳ, ಅಸ್ಸಾ)
ಜನವರಿ 17: ಗುರು ಗೋವಿಂದ್ ಸಿಂಗ್ ಜಯಂತಿ
ಜನವರಿ 21: ಭಾನುವಾರ
ಜನವರಿ 23: ನೇತಾಜಿ ಸುಭಾಷ್ ಚಂದ್ರಬೋಷ್ ಜಯಂತಿ
ಜನವರಿ 26: ಗಣರಾಜ್ಯೋತ್ಸವ
ಜನವರಿ 27: 4ನೇ ಶನಿವಾರ
ಜನವರಿ 28: ಭಾನುವಾರ
ಈ ದಿನಗಳಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳು ಹಾಗೂ ಕೆಲವು ಸ್ಥಳೀಯ ಬ್ಯಾಂಕ್‌ಗಳಲ್ಲಿ ರಜೆ ಇರುತ್ತದೆ.
ಕರ್ನಾಟಕದಲ್ಲಿರುವ ಬ್ಯಾಂಕ್‌ಗಳು ಜನವರಿ 11, ಜನವರಿ 16ರಂದು ಕಾರ್ಯನಿರ್ವಹಿಸುತ್ತದೆ.
ಮಕರ ಸಂಕ್ರಾಂತಿ: ಸೂರ್ಯನು ಮಕರ ರಾಶಿಗೆ ಸಂಚರಿಸಿದಾಗ ಮಕರ ಸಂಕ್ರಾಂತಿ ಉಂಟಾಗುವುದು. ಮಕರ ಸಂಕ್ರಾಂತಿಯಿಂದ ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ಇಲ್ಲಿಂದ ಆರು ತಿಂಗಳು ಉತ್ತರಾಯಣ ಪುಣ್ಯಕಾಲ. ಮಕರ ಸಂಕ್ರಾಂತಿಯನ್ನು ದೇಶದ ಎಲ್ಲೆಡೆ ಆಚರಿಸಲಾಗುವುದು. ಮಕರ ಸಂಕ್ರಾಂತಿಯ ದಿನದಂದು ನದಿಯಲ್ಲಿ ಪುಣ್ಯ ಸ್ನಾನ ಮಾಡಲಾಗುವುದು.
ಮಕರ ಸಂಕ್ರಾಂತಿಯ ದಿನದಂದು ಸೂರ್ಯನಿಗೆ ಆರ್ಘ್ಯ ಅರ್ಪಿಸಲಾಗುವುದು. ಈ ದಿನ ಮಾಡುವ ದಾನ-ಧರ್ಮಗಳಿಗೆ ತುಂಬಾನೇ ಮಹತ್ವವಿದೆ.
75ನೇ ಗಣರಾಜ್ಯೋತ್ಸವ ಸಂಭ್ರಮ
2024ರ ಜನವರಿ 26ರಂದು 75ನೇ ಗಣರಾಜ್ಯೀತ್ಸವ ಸಂಭ್ರಮ.