ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ'ಕನ್ನಡ ಭವನ ಕಾಸರಗೋಡಿನ ಅಭಿನಂದನಾ ಸಮಾರಂಭ-2024'ಕಾರ್ಯಕ್ರಮ ಜ. 13ರಂದು ಬೆಳಗ್ಗೆ 10.30ಕ್ಕೆ ಕನ್ನಡ ಭವನ ಸಭಾಂಗಣದಲ್ಲಿ ಜರುಗಲಿದೆ.
ಅಂತಾರಾಷ್ಟ್ರೀಯ ಮಾಧ್ಯಮ ಪುರಸ್ಕಾರ ಪಡೆದುಕೊಳ್ಳಲು ದುಬೈ ತೆರಳುತ್ತಿರುವ ಪತ್ರಕರ್ತ, ಲೇಖಕ, ಸಾಹಿತಿ, ನಿರೂಪಕ ರವಿ ನಾಯ್ಕಾಪು, ಐಸಿಎಆರ್-ಸಿಪಿಸಿಆರ್‍ಐನ ಬೆಸ್ಟ್ ಟೆಕ್ನಿಕಲ್ ಅವಾರ್ಡ್ ಪಡೆದಿರುವ ಪಾಂಡುರಂಗ ಕಾಸರಗೋಡು ಹಾಗೂ ಕೇರಳ ರಾಜ್ಯ ಭಾರತ್ ಸ್ಕೌಟ್-ಏಂಡ್ ಗೈಡ್ಸ್ ಮೆಡಲ್ ಆಫ್ ಮೆರಿಟ್ ಅವಾರ್ಡ್ ವಿಜೇತ ಕಿರಣ್ ಪ್ರಸಾದ್ ಕುಡ್ಲು ಅವರಿಗೆ ಕನ್ನಡ ಭವನ ಕಾಸರಗೋಡಿನ ಅಭಿನಂದನೆ ಸಲ್ಲಿಸಲಾಗುವುದು. ಇದೇ ಸಂದರ್ಭ ವಿಶೇಷ ಆಹ್ವಾನದ ಮೇರೆಗೆ ದುಬೈ ತೆರಳಲಿರುವ ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ ಹಾಗೂ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಪೆರ್ಲ ಅವರಿಗೂ ಅಭಿನಂದನೆ ನಡೆಯುವುದಾಗಿ ಕನ್ನಡ ಭವನ ಸಂಚಾಲಕ ವಾಮನ್‍ರಾವ್ ಬೇಕಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.