ನವದೆಹಲಿ: 2024ರ ಹೊಸ ವರ್ಷದ ಸಂದರ್ಭದಲ್ಲಿ ಜೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ಆಹಾರ ಪೂರೈಕೆ ಕಂಪನಿಗಳು ದಾಖಲೆ ಸಂಖ್ಯೆಯ ಆರ್ಡರ್ ಪಡೆದಿದ್ದಾಗಿ ಹೇಳಿಕೊಂಡಿವೆ.
ಹೊಸ ವರ್ಷ ಆಚರಣೆ ವೇಳೆ ಎಲ್ಲಾ ದಾಖಲೆ ಮುರಿದಿರುವುದಾಗಿ ಸ್ವಿಗ್ಗಿ ಹೇಳಿದೆ. ಹಿಂದೆ ವಿಶ್ವಕಪ್ ಫೈನಲ್ ದಿನದಂದು ಅತ್ಯಧಿಕ ಆರ್ಡರ್ ಆಗುವ ಮೂಲಕ ದಾಖಲೆ ಸೃಷ್ಟಿಯಾಗಿತ್ತು. ಇದಕ್ಕೆ ಹೋಲಿಸಿದರೆ ಹೊಸ ವರ್ಷ ದಿನದಂದು ಪ್ರತಿನಿಮಿಷಕ್ಕೆ 1.6 ಸಾವಿರಕ್ಕೂ ಹೆಚ್ಚು ಆರ್ಡರ್ ಬಂದಿದೆ. ಪ್ರತಿ ನಿಮಿಷಕ್ಕೆ 1,244 ಬಿರಿಯಾನಿ ಆರ್ಡರ್ ಸ್ವೀಕರಿಸಿರುವುದಾಗಿ ಕಂಪನಿ ತಿಳಿಸಿದೆ.
2024ರ ಹೊಸ ವರ್ಷದ ಆಚರಣೆ ಎಲ್ಲಾ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಸ್ವಿಗ್ಗಿ ಫುಡ್ ಮಾರುಕಟ್ಟೆಯ ಸಿಇಒ ರೋಹಿತ್ ಕಪೂರ್ ಹೇಳಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿ 4.8 ಲಕ್ಷಕ್ಕೂ ಹೆಚ್ಚು ಬಿರಿಯಾನಿ ಆರ್ಡರ್ ಮಾಡಲಾಗಿದೆ ಮತ್ತು ಹೆಚ್ಚು ಬಿರಿಯಾನಿ ಆರ್ಡರ್ ನಲ್ಲಿ ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಟಾಪ್ 3 ನಗರಗಳಾಗಿವೆ.
ಮುಂಬೈನಲ್ಲಿ ಅತಿ ಹೆಚ್ಚು ಇಡ್ಲಿ-ವಡಾಗಳನ್ನು ಆರ್ಡರ್ ಮಾಡಲಾಗಿತ್ತು. 95 ಸಮೋಸಾಗಳಿಗೆ ಬೆಂಗಳೂರು ಒಂದರಿಂದಲೇ ಆರ್ಡರ್ ಬಂದಿತ್ತು. ಸೂರತ್‌ನಿಂದ 200 ಕೆಚಪ್ ಪ್ಯಾಕೆಟ್‌ಗೆ ಆರ್ಡರ್ ಬಂದಿದ್ದಾಗಿ ಕಂಪನಿ ತಿಳಿಸಿದೆ. ಕುತೂಹಲಕಾರಿಯಾಗಿ 914 ಐಟಂಗಳೊಂದಿಗೆ ರೂ. 48, 950 ಮೊತ್ತದ 35 ಆರ್ಡರ್ ಗಳನ್ನು ಕೊಲ್ಕತ್ತಾದ ಗ್ರಾಹಕರೊಬ್ಬರು ಸ್ವಿಗ್ನಿಯಲ್ಲಿ ಮಾಡಿದ್ದರು. ಸುಮಾರು 22,000 ಕ್ಕೂ ಹೆಚ್ಚು ಬಳಕೆದಾರರು ಅಮುಲ್ ಮಜ್ಜಿಗೆಗೆ ಆರ್ಡರ್ ಮಾಡಿದ್ದರೆ, ದೆಹಲಿಯಲ್ಲಿ ಚಿಪ್ಸ್ ಮತ್ತು ಮಿಕ್ಷ್ಚರ್ ಗಾಗಿ ರೂ. 16 ಲಕ್ಷ ಮೊತ್ತದ ಆರ್ಡರ್ ಬಂದಿದೆ.
ಡಿಸೆಂಬರ್ 31ರ ಸಂಜೆ 5 ರಿಂದ 6 ಗಂಟೆ ವೇಳೆಯಲ್ಲಿ 610 ಕಿಲೋಗ್ರಾಂಗಳಷ್ಟು ಐಸ್ ನ್ನು Zepto ನಲ್ಲಿ ಮಾರಾಟ ಮಾಡಲಾಗಿದೆ ಎಂದು ಜೆಪ್ಟೊ ಸಿಇಒ ಆದಿತ್ ಪಲಿಚಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸುಮಾರು 147,512 ಚಿಪ್ಸ್ ಪ್ಯಾಕೆಟ್‌ಗಳು, 68,231 ಸೋಡಾ ಬಾಟಲಿ, 2,412 ಪ್ಯಾಕೆಟ್ ಐಸ್ ಕ್ಯೂಬ್‌ಗಳು ಮತ್ತು 356 ಲೈಟರ್‌ಗಳು ಬ್ಲಿಂಕಿಟ್‌ನಲ್ಲಿ ಮಾರಾಟವಾಗಿವೆ ಎಂದು ಇದರ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಲವ್ ಯು, ಇಂಡಿಯಾ! ಸೇವೆ ಸಲ್ಲಿಸುತ್ತಿರುವ ವಿತರಣಾ ಪಾಲುದಾರರಿಗೆ 97 ಲಕ್ಷ ರೂಪಾಯಿಗಳನ್ನು ಟಿಪ್ ಮಾಡಿದ್ದೀರಿ ಎಂದು Zomato ಸಿಇಒ ದೀಪಿಂದರ್ ಗೋಯಲ್ ಟ್ವೀಟ್ ನಲ್ಲಿ ಅಂದು ಹೇಳಿದ್ದರು.