HEALTH TIPS

2030ರ ಹೊತ್ತಿಗೆ ವಿಮಾನ ಪ್ರಯಾಣಿಕರ ಸಂಖ್ಯೆ 30 ಕೋಟಿ: ಕೇಂದ್ರ ಸಚಿವ ಸಿಂಧಿಯಾ

               ಹೈದರಾಬಾದ್: 'ಭಾರತದಲ್ಲಿ ವಿಮಾನ ಮೂಲಕ ಪ್ರಯಾಣಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಮುಖವಾಗಿದ್ದು, 2030ರ ಹೊತ್ತಿಗೆ ವಾರ್ಷಿಕ 30 ಕೋಟಿಗೆ ತಲುಪಲಿದೆ. ಹೀಗಿದ್ದರೂ, ಬೆಳವಣಿಗೆಗೆ ಇನ್ನೂ ಬಹಳಷ್ಟು ಅವಕಾಶಗಳಿವೆ' ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಭಿಪ್ರಾಯಪಟ್ಟಿದ್ದಾರೆ.

                'ವಿಂಗ್ಸ್ ಇಂಡಿಯಾ 2024' ಅನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ ಒಂದು ದಶಕದಲ್ಲಿ ಭಾರತದ ವಿಮಾನಯಾನವು ಜಾಗತಿಕ ಮಟ್ಟದಲ್ಲಿ ಹೊಳೆಯುವ ನಕ್ಷತ್ರವಾಗಿದೆ. ಸದ್ಯ ಇರುವ 149 ವಿಮಾನ ನಿಲ್ದಾಣಗಳ ಸಂಖ್ಯೆ 200ಕ್ಕೆ ಏರಿಕೆಯಾಗಲಿದೆ. ಇದರ ಬೆಳವಣಿಗೆ ಶೇ 10ರಿಂದ 15ರ ದರದಲ್ಲಿ ಇರಲಿದೆ' ಎಂದಿದ್ದಾರೆ.

               '2030ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 30 ಕೋಟಿ ಪ್ರಯಾಣಿಕರ ಗುರಿ ತಲುಪಿದರೂ, ಜಾಗತಿಕ ಮಟ್ಟದಲ್ಲಿ ಭಾರತ ಸಾಧಿಸಬೇಕಾದ್ದು ಇನ್ನೂ ಬಹಳಷ್ಟಿದೆ. ವಿಮಾನಯಾನ ಕ್ಷೇತ್ರದಲ್ಲಿ ಸದ್ಯ ಭಾರತದದ ವೃದ್ಧಿ ಶೇ 3ರಿಂದ 4 ಮಾತ್ರ. ಇದು ಇನ್ನಷ್ಟು ಬೆಳೆದರೂ ಶೇ 85ರಷ್ಟು ಸಾಧಿಸಲು ಬಾಕಿ ಇರಲಿದೆ' ಎಂದು ಸಿಂಧಿಯಾ ಹೇಳಿದ್ದಾರೆ.

             'ಕಳೆದ ಒಂದು ದಶಕದಲ್ಲಿ ಭಾರತದಿಂದ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಶೇ 6.1ರಷ್ಟು ಬೆಳವಣಿಗೆ ಕಂಡಿದೆ. ದೇಶದೊಳಗಿನ ವಿಮಾನಯಾನ ಕ್ಷೇತ್ರದಲ್ಲಿ ಭಾರತ ಜಗತ್ತಿನ 3ನೇ ಸ್ಥಾನದಲ್ಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 7ನೇ ಸ್ಥಾನದಲ್ಲಿದೆ. ಈ ಎರಡೂ ವಿಭಾಗಗಳನ್ನು ಸೇರಿಸಿದರೆ ಭಾರತ 5ನೇ ಸ್ಥಾನದಲ್ಲಿ ನಿಲ್ಲುತ್ತದೆ. ಕಾರ್ಗೊ ವಿಭಾಗದಲ್ಲಿ ಕಳೆದ 15 ವರ್ಷಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಶೇ 60ರಷ್ಟು ಹಾಗೂ ಅಂತರರಾಷ್ಟ್ರೀಯ ವಿಭಾಗದಲ್ಲಿ ಶೇ 53ರಷ್ಟು ಬೆಳವಣಿಗೆ ಕಂಡಿದೆ. ಅಮೆರಿಕ ಮತ್ತು ಚೀನಾ ಹೊರತುಡಪಡಿಸಿದರೆ, ಅತಿ ಹೆಚ್ಚು ವಿಮಾನ ಖರೀದಿಸುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಸದ್ಯ 713 ವಿಮಾನಗಳಿದ್ದು, ಮುಂದಿನ ಒಂದು ದಶಕದಲ್ಲಿ ಇದರ ಸಂಖ್ಯೆ 2 ಸಾವಿರ ದಾಟಲಿದೆ' ಎಂದಿದ್ದಾರೆ.

                ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ನಿವೃತ್ತ ಜನರಲ್ ವಿ.ಕೆ.ಸಿಂಗ್‌ ಹಾಗೂ ತೆಲಂಗಾಣ ರಸ್ತೆ ಹಾಗೂ ಕಟ್ಟಡ ಸಚಿವ ಕೆ.ವೆಂಕಟ ರೆಡ್ಡಿ ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries