ಕುಂಬಳೆ: ಮೂರು ವರ್ಷಗಳಿಗೊಮ್ಮೆ ನಡೆಯುವ ಉಪ್ಪಳ ಮಣ್ಣಂಗುಳಿ ಮಖಾಂ ಉರೂಸ್ ಜ. 20ರಿಂದ 28ರವರೆಗೆ ನಡೆಯಲಿದೆ. 20ರಂದು ಬೆಳಗ್ಗೆ 10ಕ್ಕೆ ಮಖಾಂ ಸಿಯಾರತ್ ಗೆ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಚಾಲನೆ ನೀಡಲಿದ್ದಾರೆ ಎಂದು ಸಂಬಂಧಪಟ್ಟವರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
. ಕೋಯಕುಟ್ಟಿ ತಂಙಳ್ ಅಲ್ ಬುಖಾರಿ ಉಪ್ಪಳ ಧ್ವಜಾರೋಹಣ ನೆರವೇರಿಸುವರು. ಸೈಯದ್ ಶಿಹಾಬುದ್ದೀನ್ ತಂಙಳ್ ಉದ್ಘಾಟಿಸುವರು. ಶಾಫಿ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ.
21ರಂದು ಇ.ಪಿ.ಅಬೂಬಕರ್ ಅಲ್ ಖಾಸಿಮಿ ಪತ್ತನಾಪುರ ಮುಖ್ಯ ಭಾಷಣ ಮಾಡುವರು. 22 ರಂದು ಮಸೂದ್ ಸಖಾಫಿ ಗುಡಲೂರು ಮುಖ್ಯ ಭಾಷಣ ಮಾಡಲಿದ್ದು, ಮುಂದಿನ ದಿನಗಳಲ್ಲಿ ಜುನೈದ್ ಖಾಸಿಮಿ ಈರಾಟುಪೇಟ, ಸಮೀರ್ ದಾರಿಮಿ ಕೊಲ್ಲಂ, ಪೆರೋಡ್ ಮುಹಮ್ಮದ್ ಅಝ್ಹರಿ, ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ.
ಜ.27ರ ಶನಿವಾರದಂದು ನಡೆಯುವ ಸಮಾರೋಪ ಸಭೆಯನ್ನು ಸೈಯದ್ ಮುಹಮ್ಮದ್ ಜೆಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಪಿ.ಕೆ. ಆಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಕುಮ್ಮನಂ ನಿಜಾಮುದ್ದೀನ್ ಅಝ್ಹರಿ ಮುಖ್ಯ ಭಾಷಣ ಮಾಡಲಿದ್ದಾರೆ. 28 ರಂದು ಬೆಳಗ್ಗೆ 9 ಗಂಟೆಗೆ ಮಖಾಂ ಝಿಯಾರತ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನಂಗೈ ನೇತೃತ್ವ ವಹಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಮೌಲೀದ್ ಪಾರಾಯಣ ನಡೆಯಲಿದೆ. ಅಂದು ಅನ್ನಸಂತರ್ಪಣೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಹಂಝ ಪಳ್ಳಿಕುಂಞÂ ಹಾಜಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮೋಮಿನ್, ಉಪಾಧ್ಯಕ್ಷ ಅಬ್ದುಲ್ ರಝಾಕ್ ಮುಸ್ಲಿಯಾರ್, ಉಪಾಧ್ಯಕ್ಷ ಮೊಯ್ತೀನ್ ಹಾಜಿ ಕೊಳಡುಪ್ಪು, ಜಂಟಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಕುನ್ನಿಲ್ ಉಪಸ್ಥಿತರಿದ್ದರು.