ಬದಿಯಡ್ಕ: ಕುಂಬಳೆ ಸೀಮೆಯ ಪೆರಡಾಲ ಗ್ರಾಮದ ವಾಂತಿಚ್ಚಾಲು-ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಪಂಚವರ್ಷಗಳಿಗೊಮ್ಮೆ ನಡೆಯುವ ಧರ್ಮಕೋಲ ಜನವರಿ 21 ರಂದು ಜರಗಲಿರುವುದು. ಅಂದು ಪ್ರಾತಃಕಾಲ 6 ಗಂಟೆಗೆ ದೀಪ ಪ್ರತಿಷ್ಠೆ,6.25ಕ್ಕೆ ಶ್ರೀ ದೈವದ ಭಂಡಾರ ಇಳಿಯುವುದು, ಸಾಮೂಹಿಕ ಪ್ರಾರ್ಥನೆ, 6.30ಕ್ಕೆ ಮಹಾಗಣಪತಿ ಹೋಮ, 7.30ಕ್ಕೆ ಅಷ್ಟೋತ್ತರ ಶತಸೀಯಾಳಾಭಿಷೇಕ, 8 ಕ್ಕೆ ಶ್ರೀ ಕಿನ್ನಿಮಾಣಿ ಪೂಮಾಣಿ ಮಹಿಳಾ ಭಜನಾ ಸಂಘ ಶೇಣಿ ಇವರಿಂದ ಭಜನೆ, 8.30ಕ್ಕೆ ಚತುರ್ವಿಂಶತಿ ಕಲಶ ಕ್ಷೀರಾಭಿಷೇಕ, 9ಕ್ಕೆ ಕುಣಿತ ಭಜನೆ ಆರಂಭ, 9.15ಕ್ಕೆ ವಿಶೇಷ ಪುಷ್ಪಾಲಂಕಾರದೊಂದಿಗೆ ತಂಬಿಲ ಸೇವೆ, 10.30ಕ್ಕೆ ಶ್ರೀಮಂತ್ರಮೂರ್ತಿ ಗುಳಿಗ ದೈವದ ಕೋಲ ಆರಂಭ, ಶ್ರೀ ಗುಳಿಗ ದೈವಕ್ಕೆ ಬೆಳ್ಳಿಯ ತ್ರಿಶೂಲ ಸಮರ್ಪಣ, 12.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 1.30ಕ್ಕೆ ಪ್ರಸಾದ ಭೋಜನ, ಅಪರಾಹ್ನ 2.30ಕ್ಕೆ ಶ್ರೀ ದೈವದ ಅರಸಿನ ಹುಡಿ ಪ್ರಸಾದ ವಿತರಣೆ, ಸಂಜೆ 6 ಗಂಟೆಗೆ ದೈವದ ಭಂಡಾರ ತೆಗೆಯುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.