ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಅಂಗವಾಗಿ ದೇಶ ಮತ್ತು ವಿದೇಶಗಳಿಂದ 108 ಅಡಿ ಉದ್ದದ ಅಗರಬತ್ತಿ, 2,100 ಕೆ.ಜಿ ತೂಕದ ಗಂಟೆ, 1,100 ಕೆ.ಜಿ ತೂಕದ ದೈತ್ಯ ದೀಪ, ಚಿನ್ನದ ಪಾದುಕೆ, 10 ಅಡಿ ಎತ್ತರದ ಬೀಗ ಮತ್ತು ಕೀ ಮತ್ತು ಗಡಿಯಾರವನ್ನು ಉಡುಗೊರೆಯಾಗಿ ಕಳುಹಿಸಲಾಗಿದೆ.
ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಅಂಗವಾಗಿ ದೇಶ ಮತ್ತು ವಿದೇಶಗಳಿಂದ 108 ಅಡಿ ಉದ್ದದ ಅಗರಬತ್ತಿ, 2,100 ಕೆ.ಜಿ ತೂಕದ ಗಂಟೆ, 1,100 ಕೆ.ಜಿ ತೂಕದ ದೈತ್ಯ ದೀಪ, ಚಿನ್ನದ ಪಾದುಕೆ, 10 ಅಡಿ ಎತ್ತರದ ಬೀಗ ಮತ್ತು ಕೀ ಮತ್ತು ಗಡಿಯಾರವನ್ನು ಉಡುಗೊರೆಯಾಗಿ ಕಳುಹಿಸಲಾಗಿದೆ.
ಸೀತಾ ಮಾತೆಯ ಜನ್ಮಸ್ಥಳ ನೇಪಾಳದ ಜನಕಪುರದಿಂದ 3000ಕ್ಕೂ ಹೆಚ್ಚು ಉಡುಗೊರೆಗಳು ಈಗಾಲೇ ಅಯೋಧ್ಯೆಯನ್ನು ತಲುಪಿವೆ. ಸುಮಾರು 30 ವಾಹನಗಳಲ್ಲಿ ಇವುಗಳನ್ನು ಅಯೋಧ್ಯೆಗೆ ತರಲಾಗಿದೆ. ಶ್ರೀಲಂಕಾದ ನಿಯೋಗ ಸಹ ಅಯೋಧ್ಯೆಗೆ ಭೇಟಿ ನೀಡಿ ಅಶೋಕ ವಾಟಿಕಾದಿಂದ ವಿಶೇಷ ಬಂಡೆಯನ್ನು ನೀಡಿದೆ.
ಪರೀಕ್ಷೆ ಮುಂದೂಡಿದ ಲಖನೌ ವಿ.ವಿ
ಲಖನೌ: ಬಾಲರಾಮನ ಮೂರ್ತಿ ಪ್ರತಿಪ್ಠಾಪನೆ ಅಂಗವಾಗಿ ಜ.22ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಲಖನೌ ವಿಶ್ವವಿದ್ಯಾಲಯ ಮುಂದೂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜ.22ರಂದು ರಾಜ್ಯದಾದ್ಯಂತ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಿದ ಬೆನ್ನಲ್ಲೇ ವಿ.ವಿ ತನ್ನ ನಿರ್ದಾರ ಪ್ರಕಟಿಸಿದೆ.
ಕನೌಜ್‌ನಿಂದ ಸುಗಂಧ ದ್ರವ್ಯ:
ಕನ್ನೌಜ್ (ಉತ್ತರ ಪ್ರದೇಶ): ಸುಗಂಧ ದ್ರವ್ಯಕ್ಕೆ ಪ್ರಸಿದ್ಧಿಯಾಗಿರುವ ಕನೌಜ್ ನಗರದಿಂದ ತಯಾರಾದ ವಿಶೇಷ ಸುಗಂಧ ದ್ರವ್ಯವನ್ನು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕಾಗಿ ಅಯೋಧ್ಯೆಗೆ ಕಳುಹಿಸಲಾಗುತ್ತದೆ.
ಈ ಸುಗಂಧ ದ್ರವ್ಯವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ನೀಡುವುದಾಗಿ ಸುಗಂಧ ದ್ರವ್ಯ ತಯಾರಕರ ಸಂಘದ ಅಧ್ಯಕ್ಷ ಪವನ್ ತ್ರಿವೇದಿ ತಿಳಿಸಿದ್ದಾರೆ.
ರಾಮಲಲ್ಲಾ ವಿಗ್ರಹ ಸ್ವಚ್ಛ ಮಾಡಲು ವಿಶೇಷ ರೋಸ್ ವಾಟರ್ ಸಹ ಸಿದ್ಧಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.
ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಸಿಆರ್‌ಎಸ್‌ಪಿ ಭದ್ರತೆ
: ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಇಲ್ಲಿನ ವಿಮಾನ ನಿಲ್ದಾಣದ ಭದ್ರತೆಗೆ ಕೇಂದ್ರ ಸರ್ಕಾರವು 150ಕ್ಕೂ ಹೆಚ್ಚು ಸಿಆರ್‌ಎಸ್‌ಎಫ್ ಸಿಬ್ಬಂದಿಯನ್ನು ಮಂಜೂರು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಹರ್ಷಿ ವಾಲ್ಮೀಕಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಳೆದ ಡಿಸೆಂಬರ್‌ನಲ್ಲಿ ಉದ್ಘಾಟಿಸಿದ್ದರು.